ಕರ್ನಾಟಕ

karnataka

ETV Bharat / state

ಕರುಳಬಳ್ಳಿಯನ್ನೇ ಶೌಚಾಲಯದಲ್ಲಿ ಬಿಟ್ಟು ಹೋದ ಕರುಣೆ ಇಲ್ಲದ ತಾಯಿ!

ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ತಾಯಿಯೊಬ್ಬಳು ಹೆಣ್ಣುಮಗುವಿಗೆ ಜನ್ಮ ನೀಡಿ ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

mother gives birth to baby girl, mother gives birth to baby girl in government school, mother gives birth to baby girl in school toilet, Belagavi mother news, ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ, ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ, ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ, ಬೆಳಗಾವಿ ತಾಯಿ ಸುದ್ದಿ,
ಕರಳುಬಳ್ಳಿಯನ್ನೇ ಶೌಚಾಲಯದಲ್ಲಿ ಬಿಟ್ಟು ಹೋದ ಕರುಣೆ ಇಲ್ಲದ ತಾಯಿ

By

Published : Dec 28, 2019, 10:33 PM IST

ಬೆಳಗಾವಿ: ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ತಾಯಿಯೊಬ್ಬಳು ಹೆಣ್ಣುಮಗುವಿಗೆ ಜನ್ಮ ನೀಡಿ ಮಗುವನ್ನು ಅಲ್ಲೇ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ನಡೆದಿದೆ.

ಕರುಳಬಳ್ಳಿಯನ್ನೇ ಶೌಚಾಲಯದಲ್ಲಿ ಬಿಟ್ಟು ಹೋದ ಕರುಣೆ ಇಲ್ಲದ ತಾಯಿ

ಶನಿವಾರ ಮಧ್ಯಾಹ್ನ ಒಂದು ಗಂಟೆಯ ನಂತರ ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದು, ಮಗು ಅಳುತ್ತಿರುವ ಧ್ವನಿಯನ್ನು ಸ್ಥಳೀಯರು ಕೇಳಿದ್ದಾರೆ. ಬಳಿಕ ಮಗು ಅಳುವ ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಐಗಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆ್ಯಂಬುಲೆನ್ಸ್​ ಮೂಲಕ ಅಥಣಿ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.

ಅಥಣಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಣ್ಣುಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಇನ್ಕೂಬಿಟ್​ನಲ್ಲಿ ಮಗುವಿನ ಆರೈಕೆ ಮಾಡುತ್ತಿದ್ದಾರೆ. ಇತ್ತ ಹೆಣ್ಣುಮಗುವಿಗೆ ಜನ್ಮ ನೀಡಿ ಪರಾರಿಯಾಗಿರುವ ತಾಯಿಯ ಪತ್ತೆಗಾಗಿ ಪೊಲೀಸರ ತಂಡ ಹುಡುಕಾಟ ನಡೆಸುತ್ತಿದೆ. ಈ ಘಟನೆ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details