ಅಥಣಿ (ಬೆಳಗಾವಿ): ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಖಾತರಿಪಡಿಸಿ ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಉಪ ಮುಖ್ಯಮಂತ್ರಿ ಲಕ್ಣ್ಮಣ ಸವದಿಗೆ ತಾಲೂಕು ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಗೌರವಧನ ಹೆಚ್ಚಿಸುವಂತೆ ಡಿಸಿಎಂ ಲಕ್ಷ್ಮಣ ಸವದಿಗೆ ಆಶಾ ಕಾರ್ಯಕರ್ತೆಯರ ಮನವಿ ಜಿಲ್ಲೆಯ ಕಾಗವಾಡ-ಅಥಣಿ ತಾಲೂಕಿನ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿ ನಮಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಈಗಿರುವ ಪ್ರೋತ್ಸಾಹಧನ ಮತ್ತು ಗೌರವ ಧನ ಎರಡನ್ನು ಒಟ್ಟಿಗೆ ಸೇರಿಸಿ 12 ಸಾವಿರ ಮಾಸಿಕ ಗೌರವ ಧನ ನಿಗದಿ ಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದರು.
ಇದೆ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆ ಸುಜಾತಾ ಕಾಡದಂಠ, ನಮ್ಮ ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಹಲವಾರು ಬಾರಿ ಸರ್ಕಾರ ಮಟ್ಟದ ಮನವಿ ಸಲ್ಲಿಸಿದರು ಏನು ಪ್ರಯೋಜನವಿಲ್ಲ, ಇನ್ನಾದರೂ ಡಿ ಗ್ರೂಪ್ ಕೆಲಸಕ್ಕೆ ಸರ್ಕಾರ ನಮ್ಮನ್ನು ಪರಿಗಣಿಸಬೇಕು, ಪ್ರತಿ ತಿಂಗಳು 12 ಸಾವಿರ ರೂಪಾಯಿ ನೀಡಬೇಕು, ರಾಜ್ಯ ಸರ್ಕಾರದ 3 ಸಾವಿರ ಸಂಬಳ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಎಂದರು.
ಪಕ್ಕದ ಮಹಾರಾಷ್ಟ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 10 ಸಾವಿರ ಸಂಬಳ ನೀಡುತ್ತಿದ್ದಾರೆ. ನಮ್ಮ ಸರ್ಕಾರ ನಮಗೂ ಪಕ್ಕದ ಮಹಾರಾಷ್ಟ್ರದ ಮಾದರಿಯಲ್ಲಿ ಸಂಬಳ ನೀಡಬೇಕು. ಕೊರೊನಾ ಸಂದರ್ಭದ ನಮ್ಮ ಕೆಲಸವನ್ನು ಪರಿಗಣನೆಗೆ ತೆಗೆದುಕೊಂಡು ನಮಗೆ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.