ಕರ್ನಾಟಕ

karnataka

ETV Bharat / state

ಬಿಜೆಪಿಗೆ ಗುಡ್ ಬೈ ಹೇಳಿದ ಮತ್ತೋರ್ವ ಬೆಳಗಾವಿಯ ಮಾಜಿ ಸಚಿವ

ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್​ ನೀಡದೆ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಟಿಕೆಟ್​ ನೀಡಲಾಗಿದೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Former Minister Sashikantha Naika
ಮಾಜಿ ಸಚಿವ ಶಶಿಕಾಂತ ನಾಯಿಕ

By

Published : Apr 13, 2023, 8:00 PM IST

Updated : Apr 13, 2023, 8:25 PM IST

ಮಾಜಿ ಸಚಿವ ಶಶಿಕಾಂತ ನಾಯಿಕ

ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಗೆ ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್ ನೀಡದೆ ಇರುವುದು ಮತ್ತು ಕತ್ತಿ ಅವರ ಕುಟುಂಬದ ಕಿರುಕುಳದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಮಟ್ಟದಲ್ಲಿ ಬೆಳೆಸಿದ್ದು ಬಾಬಾ ಗೌಡ‌ ಪಾಟೀಲರು ಮತ್ತು ನಾನು. ನನಗೆ ಈ ಬಾರಿ ಪಕ್ಷ ಟಿಕೆಟ್​ ನೀಡಿಲ್ಲ. ಆದರೆ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಟಿಕೆಟ್ ನೀಡಿದ್ದಾರೆ.‌ ಹೀಗಾಗಿ ಯಮಕನಮರಡಿ ಉಸ್ತುವಾರಿ‌ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.

ಕಳೆದ 20 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಹಳ್ಳಿಯ ಮಟ್ಟದಲ್ಲಿ ಇರದ ಬಿಜೆಪಿ ಪಕ್ಷವನ್ನು ಬಾಬಾ ಗೌಡರು ಹಾಗೂ ನಾವು ಸೇರಿಕೊಂಡು ಹಳ್ಳಿ ಹಳ್ಳಿಗಳಲ್ಲೂ ಪಕ್ಷ ಕಟ್ಟುವ ಕೆಲಸ ಮಾಡಿದ್ದೆವು. ಐದಾರು ಬಾರಿ ಇಷ್ಟು ವರ್ಷಗಳ ಕಾಲ ಚೆನ್ನಾಗಿ ಕೆಲಸ ಮಾಡಿದ್ದನ್ನು ನೋಡಿ ಪಕ್ಷ ನನಗೆ ಟಿಕೆಟ್ ನೀಡಿತ್ತು. ಆಗ ಉಮೇಶ್​ ಕತ್ತಿ ಅವರ ವಿರುದ್ಧ ಗೆಲುವು ಸಾಧಿಸಿದ್ದೆ. ಅಲ್ಲದೆ ಸಚಿವನಾಗಿಯೂ ಕೂಡ ಕೆಲಸ ಮಾಡಿದ್ದೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಮೊದಲ ಬಾರಿಗೆ ಅಧಿವೇಶನ ನಡೆಸಿ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದರಿಂದ ನಿರಂತರ ಕಾರ್ಯ ಚಟುವಟಿಕೆ ಮಾಡಲು ಸಾಧ್ಯವಾಯಿತು. ಉಮೇಶ್​ ಕತ್ತಿ ಬಿಜೆಪಿಗೆ ಬಂದ ಬಳಿಕ ಕೇವಲ 11 ತಿಂಗಳಿಗೇ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಪಂಚಾಯತ್ ಕೆಲಸ ಹೆಚ್ಚಿಗೆ ಆಗಿದ್ದಕ್ಕೆ ಚಿನ್ನದ ಪದಕ ಬಂದಿದ್ದು ನನ್ನ ಅವಧಿಯಲ್ಲಿ, ಪಕ್ಷ ನೀಡಿದ ಕೆಲಸವನ್ನು ನಾನು ಚಾಚು ತಪ್ಪದೆ ಮಾಡಿದ್ದೆ. ಆದರೆ ನನಗೆ ಯಾವುದೇ ರೀತಿ ಸ್ಥಾನಮಾನ ಪಕ್ಷ ನೀಡಲಿಲ್ಲ ಎಂದು ಅಸಮಾಧಾನ‌ ವ್ಯಕ್ತಪಡಿಸಿದರು.

ಉಮೇಶ್​ ಕತ್ತಿ ನಿಧನ ಬಳಿಕ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬಳಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಈಗಲೂ ನನಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೇ ರಮೇಶ್​​ ಕತ್ತಿ ಮತ್ತು ಅವರ ಕುಟುಂಬಸ್ಥರು ನನಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಶಿಕಾಂತ ನಾಯಿಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ‌. ಇದು ನನ್ನ ವಯಕ್ತಿಕ ನಿರ್ಧಾರ ಎಂದರು.

ಸುದ್ದಿಗೋಷ್ಠಿಯಲ್ಲಿ ಆರ್. ಕೆ. ಪಾಟೀಲ, ಶಿವಕುಮಾರ ನಾಯಿಕ, ಗುಂಡು ಪಾಟೀಲ, ಗುರುಶಿದ್ಧ ಮೂಡಲಗಿ, ರಾಮನಗೌಡ ಪಾಟೀಲ, ಷಣ್ಮುಖ ಕೆ. ಎಸ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮೂಡಿಗೆರೆ ಟಿಕೆಟ್ ಮಿಸ್: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಎಂಪಿ ಕುಮಾರಸ್ವಾಮಿ

Last Updated : Apr 13, 2023, 8:25 PM IST

ABOUT THE AUTHOR

...view details