ಅಥಣಿ (ಬೆಳಗಾವಿ):ಮೂಗಿಗೆ ಎರಡರಿಂದ ನಾಲ್ಕು ಹನಿ ನಿಂಬೆ ರಸ ಹಾಕುವುದರಿಂದ ಉಸಿರಾಟದ ತೊಂದರೆಯನ್ನು ತಪ್ಪಿಸಬಹುದೆಂದು ವಿಜಯ ಸಂಕೇಶ್ವರ ಸಲಹೆಯನ್ನು ವಕೀಲ ಭೀಮನಗೌಡ ಪರಗೊಂಡ ಖಂಡಿಸಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಇದು ಸುದ್ದಿ ಸುಳ್ಳು ಎಂದು ಸಾರ್ವಜನಿಕರಿಗೆ ಪ್ರಕಟಣೆ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಭೀಮನಗೌಡ ಪರಗೊಂಡ ಒತ್ತಾಯ ಮಾಡಿದ್ದಾರೆ.
ಮೂಗಿಗೆ ನಿಂಬೆ ರಸ: ವಿಜಯ್ ಸಂಕೇಶ್ವರ ಹೇಳಿಕೆಗೆ ವಕೀಲ ಭೀಮನಗೌಡ ಖಂಡನೆ - ಕೋವಿಡ್-19 ತಡೆಗೆ ನಿಂಬೆರಸ
ನಿಂಬೆ ಹಣ್ಣಿನ ರಸವನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕಿಕೊಳ್ಳುವುದರಿಂದ ಕಪ ಎಲ್ಲ ಹೊರೆಗೆ ಬಂದು ಉಸಿರಾಟ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ವಿಜಯ್ ಸಂಕೇಶ್ವರ ಅವರ ಸಲಹೆಯನ್ನು ವಕೀಲ ಭೀಮನಗೌಡ ಪರಗೊಂಡ ಖಂಡಿಸಿದ್ದಾರೆ.
ದೂರುದಾರ ಭೀಮನಗೌಡ ಪರಗೊಂಡ ಈಟಿವಿ ಭಾರತದ ಜೊತೆ ಮಾತನಾಡಿ, ದಿನಾಂಕ: 28-04-2021ರಂದು ಧಾರವಾಡದ ಮಾಜಿ ಸಂಸದ ವಿಜಯ ಸಂಕೇಶ್ವರರವರು ನಿಂಬೆ ಹಣ್ಣಿನ ರಸವನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕಿಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಬಚಾವಾಗಬಹುದು ಮತ್ತು ಯಾವುದೇ ರೀತಿಯ ಆಸ್ಪತ್ರೆಗಳಿಗೆ ಅಲೆದಾಡುವುದು ಹಾಗೂ ಈ ಕಾಯಿಲೆಯಿಂದ ಗುಣಮುಖರಾಗಲು ಆಸ್ಪತ್ರೆಯ ಚಿಕಿತ್ಸೆಗೆ ಹೆಚ್ಚುವೆಚ್ಚ ಮಾಡಬೇಕಿಲ್ಲ ಎಂದು ಸಲಹೆ ನೀಡಿದ್ದರು. ಅವರ ಹೇಳಿಕೆ ವ್ಯಾಪಕವಾಗಿ ಹಬ್ಬಿ ದೇಶದಲ್ಲಿ ಹಲವಾರು ಜನರು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರನ್ವಯ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ನಟರಾಜ ಕಾಲನಿಯ ಶಿಕ್ಷಕ ಬಸವರಾಜ ಎಂಬುವರು ಬುಧವಾರ ಬೆಳಗ್ಗೆ ಸಂಕೇಶ್ವರ ಅವರ ಸಲಹೆಗಳನ್ನು ಪಾಲನೆ ಮಾಡಿದ್ದರು ಎನ್ನಲಾಗಿದೆ. ಆದರೆ ಅವರು ಅಸುನೀಗಿದ್ದರು ಕೂಡಾ. ಇವರಿಗೆ ಈ ಮೊದಲು ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಸದ್ಯ ಬಡ ಜನರು ಈ ದುರಂತಕ್ಕೆ ತುತ್ತಾಗುವ ಮೊದಲು ಸರ್ಕಾರ ಮಧ್ಯ ಪ್ರವೇಶಿಸಿ ಇದು ಸುದ್ದಿ ಸುಳ್ಳು ಎಂದು ಸಾರ್ವಜನಿಕರಿಗೆ ಪ್ರಕಟಣೆ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಕುಮಾರ್ ಹಾಗೂ ರಾಯಚೂರು ಮತ್ತು ಧಾರವಾಡ ಜಿಲ್ಲಾಧಿಕಾರಿ ಮತ್ತು ಸಿಂಧನೂರು ತಹಶೀಲ್ದಾರ್ ಅವರಿಗೆ ಒತ್ತಾಯ ಮಾಡಿದ್ದಾರೆ.