ಕರ್ನಾಟಕ

karnataka

ETV Bharat / state

ಹುಕ್ಕೇರಿಯಲ್ಲಿ ಬ್ಲೇಡ್​ನಿಂದ ಹಲ್ಲೆ ಪ್ರಕರಣ, ಓರ್ವ ಆರೋಪಿ ಬಂಧಿಸಿದ ಪೊಲೀಸರು - ಹುಕ್ಕೇರಿ ಪೊಲೀಸ್ ಠಾಣೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದ್ದ ರಾಜ್ಯೋತ್ಸವ ಸಮಾರಂಭ ಮೆರವಣಿಗೆಯಲ್ಲಿ ನಾಲ್ಕು ಜನರಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಮೊಶೀನ ತೇರಣಿ ಎಂಬ ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮೊಶೀನ ತೇರಣಿ
ಮೊಶೀನ ತೇರಣಿ

By

Published : Nov 24, 2022, 10:53 PM IST

ಅಥಣಿ: ಹುಕ್ಕೇರಿ ಪಟ್ಟಣದಲ್ಲಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಹುಕ್ಕೇರಿ ಪೊಲೀಸರು ಬಂಧನ ಮಾಡಿದ್ದಾರೆ.

ಪ್ರಕರಣ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದ್ದ ರಾಜ್ಯೋತ್ಸವ ಸಮಾರಂಭ ಮೆರವಣಿಗೆಯಲ್ಲಿ ನಾಲ್ಕು ಜನರಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಲಾಗಿತ್ತು. ಇದರಲ್ಲಿ ಚೇತನ ಹಡಪದ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಮೂರು ಜನರು ಸಣ್ಣ ಪುಟ್ಟ ಗಾಯಾಳುವಾಗಿದ್ದರು‌.

ಪ್ರಕರಣ

ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಮೊಶೀನ ತೇರಣಿ ಎಂಬ ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಘಟನೆಗೆ ಒಂದು ತಿಂಗಳ ಹಿಂದೆ ಮದ್ಯ ಕುಡಿಯುವ ವಿಚಾರದಲ್ಲಿ ಜಗಳವಾಗಿದ್ದು, ಹಳೆಯ ವೈಷಮ್ಯ ಕಾರಣ ಎಂಬುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ

ABOUT THE AUTHOR

...view details