ಕರ್ನಾಟಕ

karnataka

ETV Bharat / state

ಕೇಂದ್ರ ಸಚಿವ ಸುರೇಶ್‌ ಅಂಗಡಿ ತವರೂರಿನ ರಸ್ತೆ ಇದು.. ಮಳೆ ಬಂದ್ರೇ ಇದೇ ಗತಿ

ಸ್ವಲ್ಪ ಆಯ ತಪ್ಪಿದರೂ ಸಾವಿನ ಬಾಗಿಲು ತಟ್ಟುವಂತಿರುವ ರಸ್ತೆ ಇದಾಗಿದೆ. ಸವಾರರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರವೇ ರಸ್ತೆ ದುರಸ್ಥಿಗೆ ಮುಂದಾಗಬೇಕು. ಇಲ್ಲವೇ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಜವಾಬ್ದಾರಿ..

A road ruined by rain in belgavi
ಮಳೆಯಿಂದ ಹಾಳಾದ ರಸ್ತೆ

By

Published : Aug 9, 2020, 4:08 PM IST

ಬೆಳಗಾವಿ : ಧಾರಾಕಾರ ಮಳೆಯಿಂದಾಗಿ ಬೆಂಡಿಗೇರಿ ಗ್ರಾಮದಿಂದ ಕೆ ಕೆ ಕೊಪ್ಪಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ಭಾಗಶಃ ನೀರಿನಲ್ಲಿ ಕೊಚ್ಚಿ ಹೋಗಿದೆ.

ಮಳೆಯಿಂದ ಹಾಳಾದ ರಸ್ತೆ

ಕೇಂದ್ರ ಸಚಿವ ಸುರೇಶ್‌ ಅಂಗಡಿಯವರ ಸ್ವಗ್ರಾಮ ಕೆ ಕೆ ಕೊಪ್ಪದ ರಸ್ತೆ ಇದಾಗಿದೆ. ತಾಲೂಕಿನ ಬೆಂಡಿಗೇರಿಯಿಂದ ಹಾಲಮರ್ಡಿ, ಕೆ ಕೆ ಕೊಪ್ಪ ಸೇರಿದಂತೆ ಇತರ ಗ್ರಾಮಗಳ ಮೂಲಕ ಬೆಳಗಾವಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು. ಈ ಮಾರ್ಗದ ಮೂಲಕವೇ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸವಾರರು ನಿತ್ಯವೂ ಹರಸಾಹಸ ಪಡುವಂತಾಗಿದೆ.

ಸ್ವಲ್ಪ ಆಯ ತಪ್ಪಿದರೂ ಸಾವಿನ ಬಾಗಿಲು ತಟ್ಟುವಂತಿರುವ ರಸ್ತೆ ಇದಾಗಿದೆ. ಸವಾರರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರವೇ ರಸ್ತೆ ದುರಸ್ಥಿಗೆ ಮುಂದಾಗಬೇಕು. ಇಲ್ಲವೇ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಜವಾಬ್ದಾರಿ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.

ಗುಣಮಟ್ಟದ ರಸ್ತೆ ಕಾಮಗಾರಿ ಅಲ್ಲದ್ದರಿಂದ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಇನ್ನಾದರೂ ಸರ್ಕಾರ ಇಂತಹ ಅಕ್ರಮ ಕಾಮಗಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥ ಗಂಗಯ್ಯಾ ಹಿರೇಮಠ ಅವರ ಆಗ್ರಹ.

ABOUT THE AUTHOR

...view details