ಬೆಳಗಾವಿ: ಪ್ಲಾಸ್ಟಿಕ್ ಕವರ್ನಲ್ಲಿ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಿರುವ ಅಮಾನವೀಯ ಘಟನೆ ಖಾನಾಪೂರ ತಾಲೂಕಿನ ನೇರಸಾ ಗೌಳಿವಾಡ ಗ್ರಾಮದಲ್ಲಿ ನಡೆದಿದೆ. ಸದ್ಯ ಮಗು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ಲಾಸ್ಟಿಕ್ ಕವರ್ನಲ್ಲಿ ಗಂಡು ಮಗುವನ್ನಿಟ್ಟು ಮರಕ್ಕೆ ನೇತು ಹಾಕಿದ ತಾಯಿ - newborn baby found
ತಾಯಿಯೊಬ್ಬಳು ಪ್ಲಾಸ್ಟಿಕ್ ಕವರ್ನಲ್ಲಿ ಗಂಡು ಮಗುವನ್ನಿಟ್ಟು ಮರಕ್ಕೆ ನೇತು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಕಂಡು ಬಂದಿದೆ.
ಗ್ರಾಮದಲ್ಲಿ ಅಪರಿಚಿತ ತಾಯಿಯೊಬ್ಬರು ನಿನ್ನೆ ರಾತ್ರಿ ಪ್ಲಾಸ್ಟಿಕ್ ಕವರ್ನಲ್ಲಿ ಗಂಡು ಶಿಶುವನ್ನಿಟ್ಟು ಮರಕ್ಕೆ ನೇತು ಹಾಕಿ ಹೋಗಿದ್ದಾರೆ. ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಶಿಶುವನ್ನು ಖಾನಾಪೂರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ, ಚಿಕ್ಕಮಕ್ಕಳ ವೈದ್ಯ ಡಾ.ಪವನ್ ಪೂಜಾರಿ ಎಂಬುವವರು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕಳೆದ ರಾತ್ರಿ ಮಗುವನ್ನು ಪ್ಲ್ಯಾಸ್ಟಿಕ್ ಕವರನಲ್ಲಿ ಹಾಕಿದ್ದರಿಂದ ಮಗುವಿನ ಆರೋಗ್ಯದಲ್ಲಿ ಏರು ಪೇರಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಬಿಮ್ಸ್ಗೆ ಮಗುವನ್ನು ರವಾನಿಸಲಾಗಿದ್ದು, ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಓದಿ:ಜೋಳಿಗೆಯಲ್ಲಿದ್ದ ಮಗು ನಾಪತ್ತೆ.. ಹೆತ್ತ ಕರುಳು ಬಳ್ಳಿ ಕಳೆದುಕೊಂಡು ತಾಯಿ ಕಣ್ಣೀರು