ಕರ್ನಾಟಕ

karnataka

ETV Bharat / state

ಬಿಜೆಪಿ ಮಣಿಸಲು ಮತ್ತೆ ಲಿಂಗಾಯತ ಅಸ್ತ್ರ: ಫಲಿಸುವುದೇ ಕೈ ತಂತ್ರ! - news kannada

ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ಸಂಸದ ಸುರೇಶ ಅಂಗಡಿ ಅವರನ್ನು ಈ ಬಾರಿ ಮಣಿಸಲೇಬೇಕು ಎಂಬ ಹಠದಲ್ಲಿರುವ ಕ್ಷೇತ್ರದ ಕಾಂಗ್ರೆಸ್​ ಮುಖಂಡರು ಹೊಸ ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ. ಆ ಅಸ್ತ್ರ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಬಿಜೆಪಿ ಸಂಸದ ಸುರೇಶ ಅಂಗಡಿ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ್

By

Published : Mar 25, 2019, 7:29 PM IST

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಮರಳಿ 'ಕೈ'ವಶ ಮಾಡಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್, ಅಚ್ಚರಿಯ ಹೆಜ್ಜೆ ಇಟ್ಟಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಲಿಂಗಾಯತ ಅಸ್ತ್ರ ಪ್ರಯೋಗಿಸಿರುವ ಕೈ ನಾಯಕರ ತಂತ್ರ ಈ ಭಾರಿಯಾದರೂ ಫಲಿಸುವುದೇ ಎಂಬುವುದು ಕುತೂಹಲ ಮೂಡಿಸಿದೆ.

ಬೆಳಗಾವಿ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿಯ ಸುರೇಶ ಅಂಗಡಿ ಅವರನ್ನು ಈ ಭಾರೀ ಮಣಿಸಲೇಬೇಕು ಎಂದು ಜಿಲ್ಲೆಯ ಕೈ ನಾಯಕರು ಪಣತೊಟ್ಟಿದ್ದಾರೆ. ಅಂಗಡಿ ಅವರಿಗೆ ಠಕ್ಕರ್ ಕೊಡಲೆಂದೇ ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ್​ ಅವರಿಗೆ ಕಾಂಗ್ರೆಸ್ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಬಿಜೆಪಿ ಸಂಸದ ಸುರೇಶ ಅಂಗಡಿ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ್

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮರಾಠ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಬಿಜೆಪಿಯಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿಯುತ್ತಿರುವ ಸುರೇಶ ಅಂಗಡಿ ಕೂಡ ಲಿಂಗಾಯತ ಸಮುದಾಯದವರೇ. ಹೀಗಾಗಿಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಅಂಗಡಿ ಅವರ ವಿರುದ್ಧ ಪ್ರಬಲ ಲಿಂಗಾಯತ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಿದ್ದರು. ಕೊನೆಯ ಕ್ಷಣದಲ್ಲಿ ಟಿಕೆಟ್​ ಸಿಕ್ಕರೂ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದರು. ಹೆಬ್ಬಾಳ್ಕರ್ ಶಾಸಕಿಯಾದ ಕಾರಣ ಜಿಲ್ಲೆಯ ಕಾಂಗ್ರೆಸ್​ನ ಹಿರಿಯ ನಾಯಕ ವಿ.ಎಸ್. ಸಾಧುನವರ ಅವರಿಗೆ ಈ ಸಾರಿ ಟಿಕೆಟ್ ನೀಡಲಾಗಿದೆ. ಇವರೂ ಕೂಡ ಪ್ರಬಲ ಲಿಂಗಾಯತ ನಾಯಕರಾಗಿದ್ದು, ಸವದತ್ತಿ, ಬೈಲಹೊಂಗಲ, ರಾಮದುರ್ಗ ಹಾಗೂ ಬೆಳಗಾವಿ ನಗರದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಜಿಲ್ಲೆಯ ಕೈ ನಾಯಕರ ಸಭೆ ನಡೆದಿತ್ತು. ಸಭೆಯಲ್ಲಿ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಜಿಲ್ಲೆಯ ನಾಯಕರು ವ್ಯಕ್ತಪಡಿಸಿದ್ದರು. ಉದ್ಯಮಿಗಳಾದ ವಿ.ಎಸ್. ಸಾಧುನವರ್​ ಹಾಗೂ ಶಿವಕಾಂತ ಸಿದ್ನಾಳ ಅವರ ಹೆಸರನ್ನು ಬೆಳಗಾವಿ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿತ್ತು. ಟಿಕೆಟ್​​ಗಿ ಇಬ್ಬರ ನಡುವೆಯೂ ಪ್ರಬಲ ಪೈಪೋಟಿ ಇತ್ತು. ಶಿವಕಾಂತ ಸಿದ್ನಾಳ ಅವರ ತಂದೆ ಎಸ್.ಬಿ. ಸಿದ್ನಾಳ ಅವರು ಬೆಳಗಾವಿ ಕ್ಷೇತ್ರದಿಂದ 4 ಸಲ ಸಂಸದರಾಗಿದ್ದರು. ಆದರೆ, ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುವಲ್ಲಿ ಎಸ್.ಬಿ.ಸಿದ್ನಾಳ ಅವರು ವಿಫಲರಾಗಿದ್ದು, ವಿ.ಎಸ್. ಸಾಧುನವರ ಅವರಿಗೆ ಟಿಕೆಟ್ ಸಿಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ABOUT THE AUTHOR

...view details