ಚಿಕ್ಕೋಡಿ :ಕಳೆದ 3 ತಿಂಗಳಿನಿಂದ ಬತ್ತಿ ಹೋಗಿರುವ ಉತ್ತರ ಕರ್ನಾಟಕದ ಕೃಷ್ಣಾ ನದಿಗೆ ಘಟಪ್ರಭೆಯಿಂದ ಇದೀಗ ಬರೀ ಒಂದು ಟಿಎಂಸಿ ನೀರನ್ನು ಹರಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೃಷ್ಣಾನದಿ ಬತ್ತಿ ಹೋಗಿದ್ದರಿಂದ ಘಟಪ್ರಭೆಯ ನೀರನ್ನ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ಹರಿಸಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಅದರಂತೆ ಕಾಲುವೆಗೆ ನೀರು ಸಹ ಹರಿಯ ಬಿಡಲಾಗಿದೆ. ಬರೋಬ್ಬರಿ 94 ಕಿ.ಮೀ ದೂರ ನೀರು ಬಂದು ಕೃಷ್ಣೆಯ ಒಡಲು ಸೇರಬೇಕು. ನೀರು ಹರಿಯುವ ದಾರಿಯಲ್ಲಿ ಸಣ್ಣ ಕಾಲುವೆಗಳು ಮತ್ತು ಚಿಕ್ಕ ಹಳ್ಳಗಳು ಸೇರಿವೆ.
ಘಟಪ್ರಭಾ ಜಲಾಶಯದಿಂದ ಕೃಷ್ಣಾ ನದಿಗೆ 1ಟಿಎಂಸಿ ನೀರು ಅಧಿಕಾರಿಗಳ ನಿರ್ಲಕ್ಷತನದಿಂದ ಕೃಷ್ಣೆಯ ಒಡಲು ಸೇರಬೇಕಿದ್ದ ನೀರು ಕೆಲ ಪ್ರಭಾವಿ ರೈತರ ಗದ್ದೆ ಸೇರ್ತಿದೆ. ರಾತ್ರಿ ಹೊತ್ತು ಕಾಲುವೆಗಳಿಗೆ ಜನರೇಟರ್ ಮೂಲಕ ಇಲ್ಲಿನ ಪ್ರಭಾವಿ ನಾಯಕರು ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿರುವುದರಿಂದ ಕೃಷ್ಣಾ ನದಿಗೆ ಬಂದು ತಲುಪಬೇಕಾದ ನೀರಿನ ಪ್ರಮಾಣ ಕಡಿಮೆಯಾಗಿದೆ.
ಇತ್ತ ಅಥಣಿಯಲ್ಲಿ ಕಳೆದ 13 ದಿನಗಳಿಂದ ಕೃಷ್ಣ ನದಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಕೆಲ ರೈತರು ಆಡೋ ಆಟಗಳಿಂದಾಗಿ ನದಿಗೆ ನೀರು ಸಿಗದೆ ಸರ್ಕಾರದ ಯತ್ನ ವಿಫಲವಾಗಿದೆ. ಈ ಬಗ್ಗೆ ಹಿಡ್ಕಲ ಜಲಾಶಯದ ಜ್ಯೂನಿಯರ್ ಇಂಜಿನಿಯರ್ ಎಸ್ ಆರ್ ಕಾಮತರನ್ನು ಕೇಳಿದ್ರೇ, ಯಾವುದೇ ರೀತಿ ತೊಂದರೆ ಆಗಿಲ್ಲ. ಒಂದು ವೇಳೆ ತೊಂದರೆ ಆಗಿದ್ದರೂ ಕೂಡಾ ನಮ್ಮ ಸಿಬ್ಬಂದಿ ತೆರವುಗೊಳಿಸಿದ್ದಾರೆ ಅಂತಾರೆ.