ಬೆಂಗಳೂರು:ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಯೋಜನೆ ಎರಡು ವರ್ಷದ ಹಿಂದಿನ ಚಿಂತನೆ. ನಾನೂ ಈ ವರೆಗೂ ಕೇವಲ ಒಂದಲ್ಲ ಎರಡಲ್ಲ ನೂರಾರು ಹಿಂದೂ ದೇವಾಲಯಗಳ ನಿರ್ಮಾಣಕ್ಕೂ ನೆರವಾಗಿದ್ದೇನೆ. ಆದರೆ, ಪ್ರಚಾರ ಮಾಡಿಕೊಂಡಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಇಂದು ತಮ್ಮ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನಕಪುರದಲ್ಲಿ ನಿರ್ಮಾಣವಾಗುತ್ತಿರೋ ಯೇಸುವಿನ ಏಕಶಿಲಾ ಮೂರ್ತಿಯ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು. ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಯೋಜನೆ ಇಂದು ನಿನ್ನೆಯದ್ದಲ್ಲ. ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆದಿತ್ತು. ಈಗ ಅಲ್ಲಿನ ಜನಕ್ಕೆ ನೀಡಿದ್ದ ಭರವಸೆ ಪೂರ್ಣಗೊಳಿಸಿದ್ದೇನೆ. ಇದಷ್ಟೇ ಅಲ್ಲ. ಈ ವರೆಗೂ ಒಂದಲ್ಲ ಎರಡಲ್ಲ ನೂರಾರು ದೇವಾಲಯಗಳ ನಿರ್ಮಾಣಕ್ಕೆ ನೆರವಾಗಿದ್ದೇನೆ. ಆದರೆ, ಅವ್ಯಾವುದನ್ನೂ ಸುದ್ದಿಗಾಗಿ ಮಾಡಿ, ಪ್ರಚಾರ ಮಾಡಿಲ್ಲ ಅಷ್ಟೇ ಎಂದರು.