ಕರ್ನಾಟಕ

karnataka

ETV Bharat / state

ನೇಕಾರರ 100 ಕೋಟಿ ರೂ ಸಂಪೂರ್ಣ ಸಾಲಮನ್ನಾ... ರೈತರಿಗೂ ಬಂಪರ್ ಕೊಡುಗೆ​ ಘೋಷಿಸಿದ ಬಿಎಸ್​ವೈ - ವಿಧಾನಸೌಧ

ಬಿಎಸ್​ವೈ ಸುದ್ದಿಗೋಷ್ಠಿ

By

Published : Jul 26, 2019, 4:27 PM IST

Updated : Jul 26, 2019, 8:15 PM IST

19:54 July 26

ನೇಕಾರರ 100 ಕೋಟಿ ರೂ. ಸಂಪೂರ್ಣ ಸಾಲಮನ್ನಾ... ರೈತರಿಗೂ ಬಂಪರ್ ಕೊಡುಗೆ​ ಘೋಷಿಸಿದ ಬಿಎಸ್​ವೈ

ಬಿಎಸ್​ವೈ ಮಹತ್ವದ ಘೋಷಣೆ

ಬಿಎಸ್​ವೈ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇನೆ. ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ನೀಡುವ ಕೇಂದ್ರ 6 ಸಾವಿರ ರೂ ಜೊತೆಗೆ ರಾಜ್ಯ ಸರ್ಕಾರ 2 ಕಂತುಗಳಲ್ಲಿ 4 ಸಾವಿರ ರೂ ನೀಡುತ್ತೇನೆ. ಹಾಗೂ ನೇಕಾರರ 100ಕೋಟಿ ರೂ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಬಿಎಸ್​ವೈ ತಿಳಿಸಿದರು.

  • ಸಂಪುಟದಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ: ಬಿಎಸ್​ವೈ
  • ನೇಕಾರರ 100ಕೋಟಿ ರೂಪಾಯಿ ಸಾಲಮನ್ನಾ
  • 2ಕಂತುಗಳಲ್ಲಿ 4 ಸಾವಿರ ನೀಡಲು ಬಿಎಸ್​ವೈ ಘೋಷಣೆ
  • ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಗೆ ರಾಜ್ಯದಿಂದ 4 ಸಾವಿರ ಹಣ
  • 2ಕಂತುಗಳಲ್ಲಿ 4 ಸಾವಿರ ಹಣ ನೀಡಲು ಬಿಎಸ್​ವೈ ನಿರ್ಧಾರ
  • ಸೋಮವಾರದಿಂದ ವಿಧಾನಸಭಾ ಕಲಾಪ ನಡೆಸಲು ಬಿಎಸ್​ವೈ ನಿರ್ಧಾರ
  • ರೈತ,ನೇಕಾರ,ಕೃಷಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ

19:49 July 26

ನೂತನ ಸಿಎಂರಿಂದ ಮೊದಲ ಸುದ್ದಿಗೋಷ್ಠಿ... ಕಾರ್ಗಿಲ್​  ಹುತಾತ್ಮ ಯೋಧರಿಗೆ ನಮನ

  • ನೂತನ ಸಿಎಂರಿಂದ ಮೊದಲ ಸುದ್ದಿಗೋಷ್ಠಿ... ಕಾರ್ಗಿಲ್​  ಹುತಾತ್ಮ ಯೋಧರಿಗೆ ನಮನ
  • ವಿಧಾನಸೌದದಲ್ಲಿ ನಡೆದ ಮೊದಲ ಸುದ್ದಿಗೋಷ್ಠಿ
  • ಸಿಎಂ ಆಗಲು ಅವಕಾಶ ನೀಡಿದ ರಾಜ್ಯದ ಜನತೆಗೆ ಧನ್ಯವಾದ
  • ಇದು ರಾಜ್ಯದ ಜನತೆಗೆ ಸಿಕ್ಕಿರುವ ಅತಿದೊಡ್ಡ ಗೆಲುವು
  • ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ನಾನು ಮಾಡಲ್ಲ

18:33 July 26

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ನಾನು... ಸಿಎಂ ಆಗಿ ಬಿಎಸ್​ವೈ ಪ್ರಮಾಣ

ಪ್ರತಿಜ್ಞಾವಿಧಿ ಸ್ವೀಕಾರ

ಬೆಂಗಳೂರು:ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.ಸಂಜೆ 6.30ಕ್ಕೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 

ಬಿಎಸ್​ ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದರು.

  • ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ನಾನು... ಸಿಎಂ ಆಗಿ ಬಿಎಸ್​ವೈ ಪ್ರಮಾಣ
  • ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಿಎಸ್​ ಯಡಿಯೂರಪ್ಪ
  • ಕರ್ನಾಟಕ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಿಎಸ್​ ಯಡಿಯೂರಪ್ಪ
  • 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಯಡಿಯೂರಪ್ಪ
  • ದೇವರ ಹೆಸರಿನಲ್ಲಿ ಬಿಎಸ್​ ಯಡಿಯೂರಪ್ಪ ಪ್ರಮಾಣ ವಚನ
  • ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ
  • ರಾಜ್ಯಪಾಲ ವಜೂಭಾಯ್​ ವಾಲಾ ಅವರಿಂದ ಪ್ರತಿಜ್ಞಾವಿಧಿ ಬೋಧನೆ

18:29 July 26

ಸಮಾರಂಭದ ವೇದಿಕೆಗೆ ಆಗಮಿಸಿದ ರಾಜ್ಯಪಾಲ ವಜೂಭಾಯ್​​​ ವಾಲಾ

ಬಿಎಸ್​ವೈ ಪ್ರಮಾಣ
  • ರಾಜಭವನಕ್ಕೆ ಆಗಮಿಸಿದ ರಾಜ್ಯಪಾಲ ವಜೂಭಾಯ್​​ ವಾಲಾ
  • ಬಿಎಸ್​ ಯಡಿಯೂರಪ್ಪನವರಿಗೆ ಪ್ರತಿಜ್ಞಾವಿಧಿ ಭೋದನೆ ಮಾಡಲಿರುವ ರಾಜ್ಯಪಾಲರು
  • ಸಮಾರಂಭದ ವೇದಿಕೆಗೆ ಆಗಮಿಸಿದ ರಾಜ್ಯಪಾಲ ವಜೂಭಾಯ್​​​ ವಾಲಾ
  • ಸಮಾರಂಭದ ವೇದಿಕೆಗೆ ಆಗಮಿಸಿದ ಬಿಎಸ್​ ಯಡಿಯೂರಪ್ಪ

18:11 July 26

ಹಸಿರು ಶಾಲು ಹೊದ್ದು ಆಗಮಿಸಿದ ಬಿಎಸ್​ವೈ

ಹಸಿರು ಶಾಲು ಹೊದ್ದು ಬಂದ ಬಿಎಸ್​ವೈ
  • ಪ್ರಮಾಣ ವಚನ ಸ್ವೀಕಾರ ಮಾಡಲು ಹಸಿರು ಶಾಲು ಹೊದ್ದು ಬಂದ ಬಿಎಸ್​ವೈ
  • ಕೆಲವೇ ಕ್ಷಣಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿಎಸ್​ವೈ ಪ್ರಮಾಣ
  • ರಾಜಭವನದಲ್ಲಿ ಬಿಎಸ್​ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ನಾಯಕರು
  • ರಾಜಭವನದಲ್ಲಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ನಾಯಕರು
  •  ಬಿಜೆಪಿ ಕೇಂದ್ರ ಮುಖಂಡ ಮುರುಳೀಧರ್​ ರಾವ್​ ಕಾರ್ಯಕ್ರಮದಲ್ಲಿ ಭಾಗಿ

17:57 July 26

ರಾಜಭವನಕ್ಕೆ ಆಗಮಿಸಿದ ಬಿಎಸ್​ ಯಡಿಯೂರಪ್ಪ: ಕೆಲವೇ ಕ್ಷಣಗಳಲ್ಲಿ ಸಿಎಂ ಆಗಿ ಪ್ರಮಾಣ

ಬಿಎಸ್​ವೈ ಆಗಮನ
  • ರಾಜಭವನಕ್ಕೆ ಆಗಮಿಸಿದ ಬಿಎಸ್​ ಯಡಿಯೂರಪ್ಪ
  • ಹಸಿರು ಶಾಲು ಹೊದ್ದು ರಾಜಭವನಕ್ಕೆ ಆಗಮಿಸಿದ ಬಿಎಸ್​ ಯಡಿಯೂರಪ್ಪ
  • ಕೆಲವೇ ಕ್ಷಣಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ
  • ಬಿಜೆಪಿ ಕಾರ್ಯಕರ್ತರಿಂದ ಸಡಗರ-ಸಂಭ್ರಮ

17:47 July 26

ಪ್ರತಿಜ್ಞಾವಿಧಿಗೆ ಕ್ಷಣಗಣನೆ... ಬಿಜೆಪಿ ಕಚೇರಿಯಿಂದ ರಾಜಭವನದತ್ತ ಬಿಎಸ್​ವೈ ಪ್ರಯಾಣ

  • ರಾಜಭವನದತ್ತ ಬಿಎಸ್​ ಯಡಿಯೂರಪ್ಪ, ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ  ಪ್ರಮಾಣ
  • ಕಾರ್ಯಕ್ರಮದಲ್ಲಿ ಮಧುಗೇರಿ ಮಾಜಿ ಕಾಂಗ್ರೆಸ್​ ಶಾಸಕ ರಾಜಣ್ಣ ಭಾಗಿ
  • ರಾಜಭವನಕ್ಕೆ ಆಗಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು, ನಾಯಕರು
  • ಬಿಜೆಪಿ ಕಚೇರಿಯಿಂದ ರಾಜಭವನದತ್ತ ಪ್ರಯಾಣ ಬೆಳಿಸಿದ ಬಿಎಸ್​ವೈ
  • ಕೆಲಹೊತ್ತಿನಲ್ಲಿ ರಾಜಭವನ ತಲುಪಲಿರುವ ಬಿಎಸ್​ ಯಡಿಯೂರಪ್ಪ

17:21 July 26

ಬಿಎಸ್​ವೈ ಪ್ರಮಾಣ ವಚನ: ರಾಜಭವನಕ್ಕೆ ರೋಷನ್​ ಬೇಗ್​ ಆಗಮನ

ರೋಷನ್​ ಬೆಗ್​ ಆಗಮನ
  • ಬಿಎಸ್​ವೈ ಪ್ರಮಾಣ ವಚನ: ರಾಜಭವನಕ್ಕೆ ರೋಷನ್​ ಬೇಗ್​ ಆಗಮನ
  • ಕಟ್ಟಾ ಸುಬ್ರಮಣ್ಯ ನಾಯ್ಡು ಜತೆ ಹಸ್ತಲಾಘವ ಮಾಡಿದ ಬೇಗ್​
  • ಶಿವಾಜಿನಗರದ ಶಾಸಕ ರೋಷನ್​ ಬೇಗ್​,ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ
  • ಯಡಿಯೂರಪ್ಪ ಪ್ರಮಾಣವಚನಕ್ಕೆ ಕ್ಷಣಗಣನೆ;ರಾಜಭವನದಲ್ಲಿ ಅಂತಿಮ ಹಂತದ ಸಿದ್ಧತೆ
  • ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ನಟ,ರಾಜಕಾರಣಿ ಜಗೇಶ್​ ಆಗಮನ
  • ರಾಜಭವನಕ್ಕೆ ಆಗಮಿಸಿದ ತೇಜಸ್ವಿನಿ ಅನಂತ್​ಕುಮಾರ್​ ಆಗಮನ
  • ತೇಜಸ್ವಿನಿ ಅನಂತ್​​​ಕುಮಾರ್​​: ಅನಂತ್​ಕುಮಾರ್​ ಅವರ ಪತ್ನಿ, ಬಿಜೆಪಿ ರಾಜ್ಯ  ಉಪಾಧ್ಯಕ್ಷೆ
  • ಸದನದಲ್ಲಿ ಬಹುಮತ ಸಾಬೀತು ಮಾಡುತ್ತೇವೆ: ಬಿಜೆಪಿ ಶಾಸಕ ಮಾಧುಸ್ವಾಮಿ
  • ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಅವರಿಗೆ ಎಲ್ಲವನ್ನೂ ಹೇಳಿದ್ದೇನೆ
  • ಬಿಎಸ್​ವೈ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರದ್ಲಾಜೆ ಭಾಗಿ

17:02 July 26

ಪ್ರತಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಆಡಳಿತ ನೀಡುವೆ:ಬಿಎಸ್​ವೈ

ಬಿಎಸ್​ವೈ ಮಾತು
  • ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಎಸ್​​ ಯಡಿಯೂರಪ್ಪ
  • ರಾಜ್ಯದ ಆರೂವರೆ ಕೋಟಿ ಜನರ ಇಚ್ಛೆ ಇತ್ತು,ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬೇಕಾಗಿತ್ತು
  • ಕಳೆದ 1 ವರ್ಷದಿಂದ ರಾಜ್ಯದ ಜನರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು:ಬಿಎಸ್​ವೈ
  • ಅಭಿವೃದ್ಧಿ ಕಾರ್ಯಗಳಿಗೆ ಜನರು ಕಾಯುತ್ತಿದ್ದಾರೆ
  • ರಾಜ್ಯದಲ್ಲಿ ತುಘಲಕ ಸರ್ಕಾರ ನಡೆಸುತ್ತಿದ್ದ ಸರ್ಕಾರ ಇದೀಗ ಪತನವಾಗಿದೆ
  • ಬೆಳಗ್ಗೆ ಅಮಿತ್​ ಶಾ ಪೋನ್​ ಮಾಡಿ, ರಾಜಭವನಕ್ಕೆ ಹೋಗಿ ರಾಜ್ಯಪಾಲರನ್ನ ಭೇಟಿಯಾಗಲು ನಿರ್ದೇಶನ
  • ಇವತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಲು ತಿಳಿಸಿದ್ದಾರೆ
  • 6ಗಂಟೆ ಮೇಲೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದೇನೆ
  • ಪ್ರತಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಆಡಳಿತ ನೀಡುವೆ
  • ರಾಜ್ಯದಲ್ಲಿ ಮೋದಿ ಸರ್ಕಾರವಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ
  • ಸಂಜೆ 7ಗಂಟೆಗೆ ಕ್ಯಾಬಿನೆಟ್​ ಸಭೆ, ಪ್ರಮುಖ ಅಂಶಗಳ ಬಗ್ಗೆ ಚರ್ಚೆ:ಬಿಎಸ್​ವೈ
  • ನಮ್ಮ ಜವಾಬ್ದಾರಿ ದೊಡ್ಡದಿದೆ. ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ

16:56 July 26

ಕಾಡುಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ ಯಡಿಯೂರಪ್ಪ ಭೇಟಿ, ವಿಶೇಷ ಪೂಜೆ

ಕಾಡುಮಲ್ಲೇಶ್ವರಂ ದೇವಾಲಯದಲ್ಲಿ ಪೂಜೆ
  • ಕಾಡುಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ ಯಡಿಯೂರಪ್ಪ ಭೇಟಿ,ವಿಶೇಷ ಪೂಜೆ
  • ಮಲ್ಲೇಶ್ವರಂನಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಬಿಎಸ್​ವೈ
  • ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಹಿನ್ನೆಲೆ, ವಿಶೇಷ ಪೂಜೆ

16:45 July 26

ರಾಜ್ಯದಲ್ಲಿ ಯಡಿಯೂರಪ್ಪ ಸ್ಥಿರವಾದ ಆಡಳಿತ ನೀಡಲಿದ್ದಾರೆ:ಜೆಪಿ ನಡ್ಡಾ

  • ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯತ್ತ ತೆರಳಿದ ಬಿಎಸ್​ ಯಡಿಯೂರಪ್ಪ
  • ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿರುವ ನಿಯೋಜಿತ ಸಿಎಂ ಬಿಎಸ್​ವೈ
  • ಕರ್ನಾಟಕದಲ್ಲಿ ಅವರದೇ ವಿಚಾರಕ್ಕಾಗಿ ಸಮ್ಮಿಶ್ರ ಸರ್ಕಾರ ಪತನವಾಗಿದೆ
  • ಇದೀಗ ಯಡಿಯೂರಪ್ಪ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ಸ್ವಚ್ಛ ಆಡಳಿತ ನೀಡಲಿದ್ದಾರೆ
  • ರಾಜ್ಯದಲ್ಲಿ ಸ್ಥಿರವಾದ ಆಡಳಿತ ನೀಡಲಿದ್ದಾರೆ:ಜೆಪಿ ನಡ್ಡಾ
  • ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹೇಳಿಕೆ
  • ಸ್ಪೀಕರ್​ ಬದಲಾವಣೆ ಬಗ್ಗೆ ರಾಜ್ಯದ ನಾಯಕರು ನೋಡಿಕೊಳ್ಳಲಿದ್ದಾರೆ.
  • ಅತೃಪ್ತ ಶಾಸಕರು ಪಕ್ಷಕ್ಕೆ ಸೇರಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ:ನಡ್ಡಾ

16:05 July 26

ನೇಕಾರರ 100 ಕೋಟಿ ರೂ ಸಂಪೂರ್ಣ ಸಾಲಮನ್ನಾ... ರೈತರಿಗೂ ಬಂಪರ್ ಕೊಡುಗೆ​ ಘೋಷಿಸಿದ ಬಿಎಸ್​ವೈ

ಬೆಂಗಳೂರು:ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿ.ಎಸ್​ ಯಡಿಯೂರಪ್ಪ ಸಂಜೆ 6:30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 4ನೇ ಬಾರಿಗೆ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. 

ಈ ಹಿನ್ನೆಲೆಯಲ್ಲಿ ರಾಜಭವನಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್ ವ್ಯವಸ್ಥೆ​ ಮಾಡಲಾಗಿದೆ.

  • ಯಡಿಯೂರಪ್ಪ ಪ್ರಮಾಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುವ ಸಿಬ್ಬಂದಿ
  • ರಾಜಭವನದ ಬಳಿ ಪೊಲೀಸ್​ ಸರ್ಪಗಾವಲು
  • ಸೋಮವಾರವೇ ಬಹುಮತ ಸಾಬೀತು ಮಾಡಲು ಮುಹೂರ್ತ ಫಿಕ್ಸ್​ ಮಾಡಿದ ಬಿಎಸ್​ವೈ
  • ನಾಳೆ ಬೂಕನಕರೆಗೆ ಭೇಟಿ ನೀಡಲಿರುವ ಯಡಿಯೂರಪ್ಪ
  • ಗ್ರಾಮದೇವತೆ ಗೋಗಾಲಮ್ಮಗೆ  ನಾಳೆ ಬಿಎಸ್​ವೈ ಪೂಜೆ ಸಲ್ಲಿಸಲಿದ್ದಾರೆ. ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೊರಡಿಸಿದ ಆದೇಶಗಳನ್ನು ತಕ್ಷಣವೇ ತಡೆಹಿಡಿಯುವಂತೆ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ  ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ನಿಯೋಜಿತ ಸಿಎಂ ಬಿಎಸ್​ವೈ ಸೂಚಿಸಿದ್ದಾರೆ. ಆದೇಶ ಪಾಲಿಸುವಂತೆ ಮುಖ್ಯ ಕಾರ್ಯದರ್ಶಿ ವಿಜಯ್​ ಭಾಸ್ಕರ್​ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  
Last Updated : Jul 26, 2019, 8:15 PM IST

ABOUT THE AUTHOR

...view details