ಕರ್ನಾಟಕ

karnataka

ETV Bharat / state

ಪಠ್ಯ ಪರಿಷ್ಕರಣೆ ಸಮಿತಿ ರದ್ದುಪಡಿಸಿ, ಇಲ್ಲದಿದ್ದರೆ ನನ್ನ ಬರಹ ಬಳಸಬೇಡಿ: ಪಾರ್ವತೀಶ್ ಬಿಳಿದಾಳೆ ಪತ್ರ

ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಸಂಕುಚಿತ ಧೋರಣೆಯ ಸಮಿತಿ ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ 8ನೇ ತರಗತಿಯ ಪಠ್ಯದಲ್ಲಿ ಇದುವರೆಗೂ ಬಳಸಲಾಗುತ್ತಿದ್ದ ನನ್ನ 'ಬಿಳಿದಾಳೆಯ ಆನೆಗಳು' ಬರಹವನ್ನು ಬಳಸದಂತೆ ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಗೆ ಪಾರ್ವತೀಶ್ ಬಿಳಿದಾಳೆ ಪತ್ರ ಬರೆದಿದ್ದಾರೆ.

writer-parvatish-bilidale-wrote-letter-to-cm-basavarj-bommai
ಪಠ್ಯ ಪರಿಷ್ಕರಣೆ ಸಮಿತಿ ರದ್ದುಪಡಿಸಿ, ಇಲ್ಲದಿದ್ದರೆ ನನ್ನ ಬರಹ ಬಳಸಬೇಡಿ: ಪಾರ್ವತೀಶ್ ಬಿಳಿದಾಳೆ ಪತ್ರ

By

Published : Jun 1, 2022, 8:46 AM IST

ಬೆಂಗಳೂರು:ರಾಜ್ಯದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ರಾಜಕೀಯ ತಿರುವು ಪಡೆದು, ಸಾಹಿತಿಗಳ ಸುತ್ತ ಸುತ್ತುತ್ತಿದೆ.‌ ಈಗಾಗಲೇ ಹಲವು ಸಾಹಿತಿಗಳು, ಲೇಖಕರು, ಬರಹಗಾರರು ತಮ್ಮ ಬರಹಗಳನ್ನ ಬಳಸದಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಬರೆಯುತ್ತಿದ್ದಾರೆ.‌ ಇದೀಗ ಲೇಖಕ ಪಾರ್ವತೀಶ್ ಬಿಳಿದಾಳೆ ಕೂಡ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪಠ್ಯ ಪರಿಷ್ಕರಣೆಗಾಗಿ ತಮ್ಮ ಸರ್ಕಾರವು ನೇಮಿಸಿರುವ ರೋಹಿತ್ ಚಕ್ರ ತೀರ್ಥ ಸಮಿತಿ ಬಸವಣ್ಣ, ಕುವೆಂಪು ಮುಂತಾದವರ ಘನತೆ ಕುಗ್ಗಿಸಿ ಅವಮಾನಿಸಿದೆ. ನಾಡಗೀತೆ ಲೇವಡಿ ಮಾಡಿದ ಹಿನ್ನೆಲೆಯೂ ಸಮಿತಿ ಸದಸ್ಯರಿಗಿದೆ. ಈ ಸಂಕುಚಿತ ಧೋರಣೆಯ ಸಮಿತಿಯನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ 8ನೇ ತರಗತಿಯ ಪಠ್ಯದಲ್ಲಿ ಇದುವರೆಗೂ ಬಳಸಲಾಗುತ್ತಿದ್ದ ನನ್ನ 'ಬಿಳಿದಾಳೆಯ ಆನೆಗಳು' ಬರಹವನ್ನು ಬಳಸದಂತೆ ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಗೆ ಪಾರ್ವತೀಶ್ ಬಿಳಿದಾಳೆ ಪತ್ರ ಬರೆದಿದ್ದಾರೆ.

ಪಾರ್ವತೀಶ್ ಬಿಳಿದಾಳೆ ಪತ್ರ

ಕವಿತೆ ಅಳವಡಿಕೆಗೆ ನೀಡಿದ್ದ ಅನುಮತಿ ಹಿಂಪಡೆದ ಡಾ‌. ಸರಜೂ ಕಾಟ್ಕರ್: 9ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿದ್ದ 'ಶಬ್ದಗಳು' ಕವಿತೆಗೆ ನೀಡಿದ್ದ ಒಪ್ಪಿಗೆಯನ್ನು ಸಾಹಿತಿ ಡಾ. ಸರಜೂ ಕಾಟ್ಕರ್ ಹಿಂಪಡೆದಿದ್ದಾರೆ. ಈಗಿನ ಪಠ್ಯಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದು ಶೈಕ್ಷಣಿಕ ಕ್ಷೇತ್ರ, ವಿದ್ಯಾರ್ಥಿಗಳು, ಪಾಲಕರಲ್ಲಿ ಹಾಗೂ ಇಡೀ ಜನಸಮೂಹದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕಾಗಿ ನನ್ನ ಕವಿತೆಗೆ ಈ ಹಿಂದೆ ಕೊಟ್ಟ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿರುವುದಾಗಿ ಪತ್ರ ಬರೆದಿದ್ದಾರೆ.

ಒಪ್ಪಿಗೆ ಹಿಂಪಡೆದವರು ಯಾರ್ಯಾರು?

  1. ದೇವನೂರು ಮಹಾದೇವ
  2. ನಾಡೋಜ ಹಂಪ ನಾಗರಾಜಯ್ಯ
  3. ರೂಪ ಹಾಸನ
  4. ಮೂಡ್ನಾಕೂಡು ಚಿನ್ನಸ್ವಾಮಿ
  5. ಚಂದ್ರಶೇಖರ ತಾಳ್ಯ
  6. ಬೊಳುವಾರು ಮಹಮದ್ ಕುಂಯಿ್ಞ
  7. ಜಿ. ರಾಮಕೃಷ್ಣ
  8. ಎಸ್‌.ಜಿ. ಸಿದ್ದರಾಮಯ್ಯ
  9. ಈರಪ್ಪ ಎಂ. ಕಂಬಳಿ
  10. ಪ್ರೊ.‌ಮಧುಸೂದನ್
  11. ಪಾರ್ವತೀಶ್, ಬಿಳಿದಾಳೆ
  12. ಡಾ. ಸರಜೂ ಕಾಟ್ಕರ್

ಇದನ್ನೂ ಓದಿ:ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ.. ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ

ABOUT THE AUTHOR

...view details