ಕರ್ನಾಟಕ

karnataka

ETV Bharat / state

ಬಿಡಬ್ಲ್ಯೂಎಸ್​ಎಸ್​ಬಿ ಕಾಮಗಾರಿ ವೇಳೆ ಅವಘಡ: ಕಾರ್ಮಿಕ ಸಾವು

ಬಿಡಬ್ಲ್ಯೂಎಸ್​ಎಸ್​ಬಿ ಕಾಮಗಾರಿ ವೇಳೆ ಸಿಮೆಂಟ್ ಸ್ಲ್ಯಾಬ್ ಬಿದ್ದ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಬೀರ ಗಾಯಗಳಾಗಿವೆ.

BWSSB worker died
ಕಾಮಗಾರಿ ವೇಳೆ ಅವಘಡ

By

Published : Nov 26, 2022, 6:28 PM IST

Updated : Nov 26, 2022, 6:57 PM IST

ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (BWSSB) ಯ ಕಾಮಗಾರಿ ವೇಳೆ ಸಿಮೆಂಟ್ ಸ್ಲ್ಯಾಬ್ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದರೆ ಮತ್ತೊಬ್ಬ ಗಾಯಗೊಂಡಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ಭಜನಾ ಮಂದಿರ ರಸ್ತೆಯಲ್ಲಿ ನಡೆದಿದೆ. ಸ್ಲ್ಯಾಬ್ ಬಿದ್ದ ಪರಿಣಾಮ ಚಲಪತಿ (25) ಸ್ಥಳದಲ್ಲೇ ಮೃತಪಟ್ಟರೆ ಮುನಿಯಪ್ಪ (45) ಎಂಬಾತ ಗಾಯಗೊಂಡಿದ್ದಾನೆ.

ಕಾಮಗಾರಿ ವೇಳೆ ಅವಘಡ

ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದವರಾಗಿದ್ದ ಇಬ್ಬರೂ ಕಾರ್ಮಿಕರು ಬಿಡಬ್ಲ್ಯೂಎಸ್​ಎಸ್​ಬಿ ಒಳಚರಂಡಿ ಕಾಮಗಾರಿಯಲ್ಲಿ ತೊಡಗಿದ್ದಾಗ ಅವಘಡ ಸಂಭವಿಸಿದೆ. ಪರಿಣಾಮ ಚಲಪತಿ ಸ್ಥಳದಲ್ಲೇ ಮೃತಪಟ್ಟರೆ, ಮುನಿಯಪ್ಪ ಗಾಯಗೊಂಡಿದ್ದಾನೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿರ್ಲಕ್ಷ್ಯತನದ ಆರೋಪದಡಿ ಕಾಮಗಾರಿ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ದೇವರಾಜ್ ಎಂಬಾತನ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಾಲ ಮರುಪಾವತಿಗೆ ಕಿತ್ತಾಟ: ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

Last Updated : Nov 26, 2022, 6:57 PM IST

ABOUT THE AUTHOR

...view details