ಬೆಂಗಳೂರು:ಕೆಲವೊಂದು ಮಾಧ್ಯಮಗಳಲ್ಲಿ ಐದಾರು ಶಾಸಕರು ರಿವರ್ಸ್ ಆಪರೇಷನ್ಗೆ ಒಳಗಾಗುತ್ತಾರೆ ಎಂದು ಪ್ರಸಾರ ಮಾಡಲಾಗುತ್ತಿದೆ. ಆದರೆ, ನಮಗೆ ರಿವರ್ಸ್ ಆಪರೇಷನ್ಗೆ ಒಳಗಾಗುವ ಅಗತ್ಯವಿಲ್ಲ ಎಂದು ಬಿಜೆಪಿಯ ಆರು ಶಾಸಕರು ಸ್ಪಷ್ಟಪಡಿಸಿದ್ದಾರೆ.
ನಮಗೆ ರಿವರ್ಸ್ ಆಪರೇಷನ್ಗೆ ಒಳಗಾಗುವ ಅಗತ್ಯವಿಲ್ಲ: ಬಿಜೆಪಿ ಶಾಸಕರ ಸ್ಪಷ್ಟನೆ - kannadanews
ಬಿಜೆಪಿ ಶಾಸಕರು ರಿವರ್ಸ್ ಆಪರೇಶನ್ಗೆ ಒಳಗಾಗುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ ಹಿನ್ನೆಲೆ ಈ ಕುರಿತು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಯಲಹಂಕದ ಹೊನ್ನೇನಹಳ್ಳಿಯಲ್ಲಿರುವ ರಮಡ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ರಾಜುಗೌಡ, ನಿರಂಜನ್ ಕುಮಾರ್, ಬಸವರಾಜ್ ದಡೇಸುಗೂರು, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಮಸಾಲೆ ಜಯರಾಮ್ ಮಾತನಾಡಿ, ನಾವು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯವಿಲ್ಲ. ದಯಮಾಡಿ ರಿವರ್ಸ್ ಆಪರೇಷನ್ನಲ್ಲಿ ನಮ್ಮ ಹೆಸರು ತರಬೇಡಿ. ನಾವು ಬೇರೆ ಪಕ್ಷಕ್ಕೆ ಹೋಗುವುದಾದರೆ ಮಾಧ್ಯಮದವರಿಗೆ ತಿಳಿಸಿ ಹೋಗುತ್ತೇವೆ ಎಂದ್ರು.
ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮಾಧ್ಯಮದವರು ಪ್ರಸಾರ ಮಾಡುತ್ತಿರುವ ತಪ್ಪು ವರದಿಗಳಿಂದ ಕ್ಷೇತ್ರದ ಕಾರ್ಯಕರ್ತರಿಗೆ ಗೊಂದಲವಾಗುತ್ತಿದೆ. ಹೋಗುವುದಾದರೆ ಕದ್ದು ಮುಚ್ಚಿ ಹೋಗುವುದಿಲ್ಲ ಎಂದು ಬೇಸರದಿಂದ ಹೇಳಿದರು. ಶಾಸಕಿ ಪೂರ್ಣಿಮಾ ಮಾತನಾಡಿ, ದಯಮಾಡಿ ಊಹಾಪೋಹದ ವರದಿಗಳನ್ನು ತೋರಿಸಿ ನಮ್ಮ ಕ್ಷೇತ್ರದ ಜನರಲ್ಲಿ ಗೊಂದಲ ತರುತ್ತಿದ್ದೀರ. ಪಕ್ಷದ ನಿಯಮದಂತೆ ಒಟ್ಟಿಗೆ ಇದ್ದೇವೆ. ನಮಗೆ ಜವಾಬ್ದಾರಿಯ ಅರಿವಿದೆ. ಯಾವುದೇ ಊಹಾಪೋಹ ಕೇಳಿ ಪ್ರಸಾರ ಮಾಡಬೇಡಿ. ನಿಮಗೆ ಸಂಶಯವಿದ್ದರೆ ನಮ್ಮನ್ನೆ ನೇರವಾಗಿ ಕೇಳಿ ಎಂದು ಹೇಳಿದರು.