ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ: ಸುಕುಮಾರ್ ಶೆಟ್ಟಿ

ಯಡಿಯೂರಪ್ಪ ಸಿಎಂ ಆಗ್ತಾರೆ, ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುವುದರ ಜೊತೆಗೆ ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಶಾಸಕ ಸುಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್

By

Published : Jul 26, 2019, 4:17 PM IST

ಬೆಂಗಳೂರು:ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಮುಂಬೈನಲ್ಲಿರುವ ಶಾಸಕರಿಗೆ ಮತ್ತು ಕಾಂಗ್ರೆಸ್ ಗೆ ಸಂಬಂಧವಿದೆ ವಿನಃ ನಮಗೆ ಅತೃಪ್ತ ಶಾಸಕರಿಗೆ ಸಂಬಂಧವಿಲ್ಲ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಲೇಬೇಕು, ಆಗೆ ಆಗುತ್ತೆ, ಆಗದೆ ಎಲ್ಲಿ ಹೋಗುತ್ತೆ.? ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಭಂದವಿಲ್ಲ. ಮುಂಬೈನಲ್ಲಿರುವ ಶಾಸಕರಿಗೂ ಕಾಂಗ್ರೆಸ್‍ಗೂ ಸಂಬಂಧವಿದೆ. ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ. ಅದರ ವಿರುದ್ದ ಬೇಸತ್ತ ಶಾಸಕರು ರಾಜೀನಾಮೆ ಕೊಟ್ಟೆದ್ದಾರೆ ಎಂದರು.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್

20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಸದ್ಯ 203 ರಲ್ಲಿ 105 ಸಂಖ್ಯಾಬಲ ನಮ್ಮ ಪರವಾಗಿದೆ, ಅದೇ ರೀತಿಯಾಗಿ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವುದರ ಜೊತೆಯಲ್ಲಿ ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಕುಮಾರ್ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್ ಯಡಿಯೂರಪ್ಪರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ರು.

ABOUT THE AUTHOR

...view details