ಕರ್ನಾಟಕ

karnataka

ETV Bharat / state

ಉಪಚುನಾವಣೆ ಎದುರಿಸಲು ನಾವು ಸಿದ್ಧ: ಎಂಟಿಬಿ ನಾಗರಾಜ್

ಉಪಚುನಾವಣೆಗೆ ಚುನಾವಣಾ ಆಯೋಗ ಮತ್ತೊಂದು ದಿನಾಂಕ ಪ್ರಕಟಿಸಿದ ಬೆನ್ನಲ್ಲೆ, ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಉಪಚುನಾವಣೆ ಎದುರಿಸಲು ನಾವು ಸಿದ್ಧ

By

Published : Sep 28, 2019, 11:31 AM IST

ಬೆಂಗಳೂರು: ಉಪ ಚುನಾವಣೆಗೆ ಆಯೋಗ ಹೊಸ ದಿನಾಂಕ ನಿಗದಿ ಮಾಡಿದ್ದು ಡಿಸೆಂಬರ್ 5ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿ ಚುನಾವಣಾ ಮರು ದಿನಾಂಕ ಘೋಷಣೆಯಾದ ಸಂಬಂಧ ಮಾತುಕತೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಸುಪ್ರೀಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸಿದ್ದೇವೆ. ಚುನಾವಣಾ ಆಯೋಗ ಮತ್ತೆ ಚುನಾವಣಾ ದಿನಾಂಕ ಪ್ರಕಟ ಮಾಡಿದೆ, ನಾವು ಚುನಾವಣೆ ಎದುರಿಸುತ್ತೇವೆ ಎಂದರು. ಬಿಜೆಪಿ ಸೇರ್ಪಡೆ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ, ಬಕೆಟ್ ಎಂದು ಎಸ್.ಟಿ ಸೋಮಶೇಖರ್ ಹೇಳಿರುವುದು ಸರಿಯಾಗಿಯೇ ಇದೆ. ಸೋಮಶೇಖರ್ ಹೇಳಿಕೆಗೆ ನನ್ನ ಸಹಮತ ಕೂಡ ಇದೆ ಎಂದರು.

ಉಪಚುನಾವಣೆ ಎದುರಿಸಲು ನಾವು ಸಿದ್ಧ: ಎಂಟಿಬಿ ನಾಗರಾಜ್

ಸಿದ್ದರಾಮಯ್ಯ-ಕೆ.ಹೆಚ್ ಮುನಿಯಪ್ಪ ಜಗಳ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಮುನಿಯಪ್ಪ ಹೇಳಿರುವ ಮಾತುಗಳು ನಿಜ. ಮುನಿಯಪ್ಪರನ್ನು ಸೋಲಿಸೋಕೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ರಮೇಶ್ ಕುಮಾರ್ ಅವರೇ ಮುನಿಯಪ್ಪ ಸೋಲಿಸಲು ಕೆಲಸ ಮಾಡಿದ್ದಾರೆ ಎಂದರು.

ABOUT THE AUTHOR

...view details