ಕರ್ನಾಟಕ

karnataka

ETV Bharat / state

ಹಿಜಾಬ್ ವಿವಾದ ಇತ್ಯರ್ಥ ಪಡಿಸಿ : ಸರ್ಕಾರಕ್ಕೆ ವಕ್ಫ್ ಬೋರ್ಡ್ ಅಧ್ಯಕ್ಷರ ಮನವಿ

ಸಚಿವರು ಹೊರಡಿಸಿರುವ ಸುತ್ತೊಲೆ ಪ್ರಕಾರ ಎಲ್ಲಿ ಈ ಮೊದಲಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿರಲಿಲ್ಲವೋ ಅಲ್ಲಿ ಬರಬಾರದು,ಎಲ್ಲಿ ಮೊದಲಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದರೋ ಅಂತಹ ಶಾಲೆಗಳಿಗೆ ಹಿಜಾಬ್ ಧರಿಸಿ ಬರಬಹುದು ಎಂದಿದೆ. ಅದಕ್ಕೆ ವಿರುದ್ಧವಾಗಿ ಯಾವುದಾದರೂ ಶಾಲಾ-ಕಾಲೇಜುಗಳು ಬಹಿಷ್ಕಾರ, ತಡೆಯಂತಹ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಫಿ ಅಸದಿ ಹೇಳಿದರು..

ಹಿಜಾಬ್ ವಿವಾದ ಇತ್ಯರ್ಥ ಪಡಿಸಿ ಎಂದು ಮನವಿ
ಹಿಜಾಬ್ ವಿವಾದ ಇತ್ಯರ್ಥ ಪಡಿಸಿ ಎಂದು ಮನವಿ

By

Published : Feb 4, 2022, 7:56 PM IST

Updated : Feb 4, 2022, 9:21 PM IST

ಬೆಂಗಳೂರು: ಹಿಜಾಬ್ ಸಂಬಂಧ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಮತ್ತು ಆದಷ್ಟು ತ್ವರಿತವಾಗಿ ವಿವಾದ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಫಿ ಅಸದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರ ರಾಜ್ಯದ ಹಲವಾರು ಕಾಲೇಜುಗಳಿಗೆ ಹರಡಿದೆ. ಈ ಬಗ್ಗೆ ದೂರುಗಳು ವಕ್ಫ್ ಬೋರ್ಡ್ ಅಧ್ಯಕ್ಷರಾದ ನನಗೆ ಬಂದಿವೆ. ಎಲ್ಲಾ ಕಡೆ ಹಿಜಾಬ್ ಧರಿಸಿ ಬಂದರೆ ಬಿಡುತ್ತಿಲ್ಲ, ತರಗತಿಯ ಹೊರಗೆ ನಿಲ್ಲಿಸುತ್ತಿದ್ದಾರೆ ಎಂದು ದೂರುಗಳು ಬಂದಿವೆ.

ಹೀಗಾಗಿ, ಶಿಕ್ಷಣ ಸಚಿವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದೆ. ಅವರು ಸಿಎಂ ಕಚೇರಿಗೆ ಬರಲು ಹೇಳಿದರು. ಹಾಗಾಗಿ, ಸಿಎಂ ಗೃಹ ಕಚೇರಿಗೆ ಬಂದು ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಕಾನೂನು ಬಿಟ್ಟು ಯಾವುದೇ ರೀತಿಯ ಬೇರೆ ನಿರ್ಧಾರಗಳನ್ನು ನಾವು ಮಾಡಿಲ್ಲ, ಮಾಡುವುದಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ ಎಂದರು.

ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ನಿಯಮದ ಪ್ರಕಾರ ಸುತ್ತೋಲೆ ಹೊರಡಿದ್ದೇವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಬಾಂಬೆ ಹೈಕೋರ್ಟ್, ಕೇರಳ ಹೈಕೋರ್ಟ್ ತೀರ್ಪನ್ನು ತೋರಿಸಿದ್ದಾರೆ. ಕಾನೂನು ಸಂಬಂಧ ನಮ್ಮ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ನಮ್ಮ ಸಮುದಾಯದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಕುಂಠಿತವಾಗಬಾರದು, ಶೈಕ್ಷಣಿಕವಾಗಿ ನಮ್ಮ ಸಮುದಾಯ ಹಿಂದುಳಿದಿದೆ. ನಮ್ಮ ಸಮುದಾಯದ ಹೆಣ್ಣು ಮಕ್ಕಳು ಇತ್ತೀಚೆಗಷ್ಟೇ ಶಿಕ್ಷಣಕ್ಕೆ ಮುಂದೆ ಬರುತ್ತಿದ್ದಾರೆ. ಈ ರೀತಿ ವ್ಯವಸ್ಥೆ ಆದಲ್ಲಿ ನಮಗೆ ತೊಂದರೆಯಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿದ್ದೇನೆ.

ಹಿಜಾಬ್‌-ಕೇಸರಿ ಶಾಲು ವಿವಾದ ಬಗೆಹರಿಸಲು ಸರ್ಕಾರಕ್ಕೆ ವಕ್ಫ್ ಬೋರ್ಡ್ ಅಧ್ಯಕ್ಷರು ಮನವಿ ಮಾಡಿರುವುದು..

ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಶಿಕ್ಷಣ ಕಾಯ್ದೆ, ನಿಯಮದ ಪ್ರಕಾರ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸಚಿವರು ಹೊರಡಿಸಿರುವ ಸುತ್ತೋಲೆ ಪ್ರಕಾರ ಎಲ್ಲಿ ಈ ಮೊದಲಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿರಲಿಲ್ಲವೋ ಅಲ್ಲಿ ಬರಬಾರದು.

ಎಲ್ಲಿ ಮೊದಲಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದರೋ ಅಂತಹ ಶಾಲೆಗಳಿಗೆ ಹಿಜಾಬ್ ಧರಿಸಿ ಬರಬಹುದು ಎಂದಿದೆ. ಅದಕ್ಕೆ ವಿರುದ್ಧವಾಗಿ ಯಾವುದಾದರೂ ಶಾಲಾ-ಕಾಲೇಜುಗಳು ಬಹಿಷ್ಕಾರ, ತಡೆಯಂತಹ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ಪ್ರಕರಣ ಹೈಕೋರ್ಟ್‌ನಲ್ಲಿದೆ. ಹೈಕೋರ್ಟ್ ತೀರ್ಪಿಗೆ ಎಲ್ಲರೂ ಬದ್ದವಿದ್ದೇವೆ ಎಂದು ಸರ್ಕಾರ ತಿಳಿಸಿದೆ. ನಮ್ಮ ಸಮುದಾಯದ ವಿದ್ಯಾರ್ಥಿಗಳು, ಜನರು, ಮೌಲಾನಾಗಳು ದೂರವಾಣಿ ಕರೆ ಮಾಡಿ ಹಿಜಾಬ್ ವಿವಾದವಾಗುತ್ತಿದೆ ಕೂಡಲೇ ಇದನ್ನು ಪರಿಹರಿಸಿ ಎಂದು ಮನವಿ ಮಾಡಿದ್ದಾರೆ. ನಮ್ಮ ಸಮುದಾಯ ವಿವಾದದಿಂದ ಆತಂಕಕ್ಕೆ ಸಿಲುಕಿದೆ. ಹಾಗಾಗಿ, ಸುಗಮವಾಗಿ ವಿವಾದ ಇತ್ಯರ್ಥಪಡಿಸಲು ಮನವಿ ಮಾಡಿದ್ದೇನೆ ಎಂದರು.

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇನೆ. ಹಿಜಾಬ್ ವಿವಾದ ಕುರಿತ ಸಮಸ್ಯೆ ಆಲಿಸಿ ಸಮುದಾಯ, ಸರ್ಕಾರದ ಜೊತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಸಲಹೆ ನೀಡುತ್ತೇನೆ ಎಂದು ಹೇಳಿದರು.

Last Updated : Feb 4, 2022, 9:21 PM IST

For All Latest Updates

TAGGED:

ABOUT THE AUTHOR

...view details