ಕರ್ನಾಟಕ

karnataka

ETV Bharat / state

ಸರ್ಕಾರ ರಚನೆಗೆ ಅವಕಾಶ: ರಾಜ್ಯಪಾಲರ ಕ್ರಮ ಅಸಾಂವಿಧಾನಿಕ: ಉಗ್ರಪ್ಪ ಆಕ್ಷೇಪ - ಉಗ್ರಪ್ಪ

ರಾಜ್ಯಪಾಲರು ಯೋಚನೆ ಮಾಡದೇ ಅವಕಾಶ ನೀಡಿದ್ದು ಹೇಗೆ, ನಿಮಗೆ 112 ಜನರ ಬಹುಮತ ಇದೆಯಾ ಎಂಬ ಬಗ್ಗೆ ರಾಜ್ಯಪಾಲರು ಬಿ ಎಸ್​ ಯಡಿಯೂರಪ್ಪ ಅವರನ್ನ ಕೇಳಬೇಕಿತ್ತು ಎಂದ ಉಗ್ರಪ್ಪ,  ಈ ಬಗ್ಗೆ ರಾಜ್ಯಪಾಲರು ಯಾಕೆ ಯೋಚನೆ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಗ್ರಪ್ಪ

By

Published : Jul 26, 2019, 1:30 PM IST

Updated : Jul 26, 2019, 3:44 PM IST

ಬೆಂಗಳೂರು:ಪ್ರಸ್ತುತ ಸಂದರ್ಭದಲ್ಲಿ ರಾಜ್ಯಪಾಲರು ಬಿ.ಎಸ್​ ಯಡಿಯೂರಪ್ಪಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬಹುದಾ ಎಂಬ ಪ್ರಶ್ನೆ ಎದ್ದಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿರುವ ಕ್ರಮ ಕಾನೂನು ಬಾಹಿರ ಹಾಗೂ ಸಂವಿಧಾನ ಬಾಹಿರ ಎಂದು ಕಾಂಗ್ರೆಸ್​ ಆರೋಪಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​ ನಾಯಕ ವಿ.ಎಸ್​. ಉಗ್ರಪ್ಪ ಮಾತನಾಡಿ, ರಾಜ್ಯಪಾಲರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಯೋಚನೆ ಮಾಡದೇ ಅವಕಾಶ ನೀಡಿದ್ದು ಹೇಗೆ, ನಿಮಗೆ 112 ಜನರ ಬಹುಮತ ಇದೆಯಾ ಎಂಬ ಬಗ್ಗೆ ರಾಜ್ಯಪಾಲರು ಬಿ ಎಸ್​ ಯಡಿಯೂರಪ್ಪ ಅವರನ್ನ ಕೇಳಬೇಕಿತ್ತು ಎಂದ ಉಗ್ರಪ್ಪ, ಈ ಬಗ್ಗೆ ರಾಜ್ಯಪಾಲರು ಯಾಕೆ ಯೋಚನೆ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಗ್ರಪ್ಪ ಮಾತು

ಮೂರು ಜನ ಅನರ್ಹತೆ ಹೊಂದಿದ್ದು, ಈಗ ಸದನದ ಬಲ 222ಕ್ಕೆ ಕುಸಿದಿದೆ. ಈ ವೇಳೆ ಸರಳ ಬಹುಮತಕ್ಕೆ ಬೇಕಾಗಿರುವುದು 112. ಆದರೆ ಬಿಜೆಪಿ ಬಳಿ ಇರುವುದು ಕೇವಲ 105 ಜನ. ಕಾಂಗ್ರೆಸ್​​ ಉಗ್ರಪ್ಪ ಹಾಗೂ ಸ್ಪೀಕರ್​ ಅವರನ್ನ ಸೇರಿಸಿದರೆ 101 ಸದಸ್ಯರನ್ನು ಹೊಂದಿದೆ. ಜೆಡಿಎಸ್​​ 34 ಸದಸ್ಯರನ್ನು ಹೊಂದಿದೆ. 12 ಜನರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಹೀಗಿದ್ದಾಗ ಬಿಜೆಪಿಗೆ ಬಹುಮತ ಇದೆಯಾ ಅನ್ನೋ ಪ್ರಶ್ನೆ ಏಳುತ್ತಿದೆ.

ಕಾಂಗ್ರೆಸ್ ನಾಯಕ ಉಗ್ರಪ್ಪ ಮಾತು

ಹೀಗಾಗಿ ರಾಜ್ಯಪಾಲರ ಕ್ರಮ ಸರಿಯಲ್ಲ ಎಂದು ಉಗ್ರಪ್ಪ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್​, ರಾಜ್ಯಪಾಲರ ಕ್ರಮ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

Last Updated : Jul 26, 2019, 3:44 PM IST

ABOUT THE AUTHOR

...view details