ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕು ಮಹದೇವಪುರದ 11 ಗ್ರಾಮ ಪಂಚಾಯತಿಗಳು ಮತ್ತು ಹೊಸಕೋಟೆಯ 26 ಗ್ರಾಮ ಪಂಚಾಯತಿಗಳ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಶುರುವಾಗಬೇಕಿತ್ತು. ಆದರೆ, ಮಹದೇವಪುರದಲ್ಲಿ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳು ಬರುವುದು ವಿಳಂಬವಾದ್ದರಿಂದ ಮತ ಎಣಿಕೆ ಕೆಲಸ ಕೂಡ ತಡವಾಗಿದೆ.
ಮಹದೇವಪುರ, ಹೊಸಕೋಟೆಯಲ್ಲಿ ಮತ ಎಣಿಕೆ ವಿಳಂಬ
ಮಹದೇವಪುರದಲ್ಲಿ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರಕ್ಕೆ ಬರುವುದು ವಿಳಂಬವಾಗಿದ್ದರಿಂದ ಬೆಳಗ್ಗೆ 8 ಗಂಟೆಯಿಂದಲೇ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಪ್ರಕ್ರಿಯೆ ತಡವಾಗಿದೆ.
ಬಳಿಕ ತಹಶೀಲ್ದಾರ್, ಚುನಾವಣಾ ಅಧಿಕಾರಿ ಮತ್ತು ಕೆ.ಆರ್.ಪುರ ಸರ್ಕಲ್ ಇನ್ಸ್ಪೆಕ್ಟರ್ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಅನ್ನು ತೆರೆದರು. ಹೊಸಕೋಟೆ ತಾಲ್ಲೂಕಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಮತ ಎಣಿಕೆ ಕೇಂದ್ರದಲ್ಲಿ 71 ಟೇಬಲ್‌ಗಳಲ್ಲಿ ಕೌಂಟಿಂಗ್ ನಡೆಯಲಿದ್ದು, 213 ಮಂದಿ ಸಿಬ್ಬಂದಿ ಹಾಗೂ 21 ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು 234 ಮತ ಎಣಿಕೆ ಸಿಬ್ಬಂದಿ ನಿಯೋಜಿಸಲಾಗಿದೆ.
ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‌ಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಗ್ಲೌಸ್‍ಗಳ ವ್ಯವಸ್ಥೆ ಮಾಡಲಾಗಿದೆ.