ಕರ್ನಾಟಕ

karnataka

ETV Bharat / state

ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ವಿರೋಧ: ಬಿಡಿಎ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಭೂಸ್ವಾಧೀನ ವಿರೋಧಿಸಿ ಇಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ  ಮಾಡಲು ಗ್ರಾಮಸ್ಥರು ಮುಂದ್ದಾಗಿದ್ದರು. ಕೆಂಪಾಪುರ ಗ್ರಾಮದ ಜನರು ಪ್ರತಿಭಟನೆಗೆ ಹೊರಟಿರುವ ಸುದ್ದಿ ತಿಳಿದ ಸೊಲದೇವನಹಳ್ಳಿ ಪೊಲೀಸರು ಮಧ್ಯರಾತ್ರಿಯೇ ಗ್ರಾಮಕ್ಕೆ ಬಂದು ಗ್ರಾಮದಿಂದ ಹೊರ ಹೋಗದದಂತೆ ತಡೆದಿದ್ದಾರೆ.

protest
ಪ್ರತಿಭಟನೆ

By

Published : Mar 24, 2021, 12:33 PM IST

ಯಲಹಂಕ(ಬೆಂಗಳೂರು):ಬೆಂಗಳೂರು ಉತ್ತರ ತಾಲೂಕಿನಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಮುಂದಾಗಿದ್ದು, ಭೂಸ್ವಾಧೀನ ವಿರೋಧಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಪೊಲೀಸರು ತಡೆದಿದ್ದು, ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳ 3,456 ಎಕರೆ 12 ಗುಂಟೆ ಜಾಗವನ್ನು ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಇದರ ವಿರುದ್ದ ಭೂಸ್ವಾಧೀನಕ್ಕೆ ಒಳಗಾದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಭೂಸ್ವಾಧೀನ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಭೂಸ್ವಾಧೀನ ವಿರೋಧಿಸಿ ಇಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಗ್ರಾಮಸ್ಥರು ಮುಂದ್ದಾಗಿದ್ದರು. ಕೆಂಪಾಪುರ ಗ್ರಾಮದ ಜನರು ಪ್ರತಿಭಟನೆಗೆ ಹೊರಟಿರುವ ಸುದ್ದಿ ತಿಳಿದ ಸೊಲದೇವನಹಳ್ಳಿ ಪೊಲೀಸರು ಮಧ್ಯರಾತ್ರಿಯೇ ಗ್ರಾಮಕ್ಕೆ ಬಂದು ಗ್ರಾಮದಿಂದ ಹೊರ ಹೋಗದದಂತೆ ತಡೆದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ದಾಸರಹಳ್ಳಿ ಶಾಸಕ ಮಂಜುನಾಥ್ ಪೊಲೀಸರ ಕ್ರಮವನ್ನು ವಿರೋಧಿಸಿದ್ದಾರೆ. ಹಿರಿಯರಿಂದ ಬಂದ ಅರ್ಧ ಎಕರೆ ಜಾಗ ಕಾಪಾಡಿಕೊಳ್ಳುವ ಕಾರಣಕ್ಕೆ ರೈತರು ಭೂಸ್ವಾಧೀನ ವಿರೋಧಿ ಭೂಮಿ ಕೊಡಲು ನಿರಾಕರಿಸಿದ್ದಾರೆ ಎಂದರು.

ಅಲ್ಲದೇ ರೈತರಿಗೆ ಪ್ರತಿಭಟನೆಯ ಮಾಡುವ ಹಕ್ಕಿಲ್ಲವೇ? ಗ್ರಾಮಕ್ಕೆ ರಾತ್ರೋರಾತ್ರಿ ನುಗ್ಗಿರುವ ಪೊಲೀಸರು ಗ್ರಾಮಸ್ಥರನ್ನು ತಡೆದಿರುವುದು ಸರಿಯಲ್ಲ, ಸಾಕಷ್ಟು ರೈತರು ಸಾಲಸೋಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ, ಇಂತಹ ಮನೆಗಳನ್ನು ಕೆಡವಲು ಮುಂದಾಗಿರುವುದು ಸರಿಯೇ, ಇಲ್ಲಿನ ರೈತರನ್ನ ಓಡಿಸಿ ಬೇರೆಯವರಿಗೆ ಈ ಜಾಗ ಕೊಡಬೇಕಾ, ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡೋಣ ಅಂದರೆ ಸಿಡಿ ಚರ್ಚೆಯೇ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಮುಂದಾಳತ್ವ ವಹಿಸಿದ ನಾಯಕರನ್ನು ಬಂಧಿಸಲು ಮಧ್ಯರಾತ್ರಿಯೇ ಪೊಲೀಸರು ಮುಂದ್ದಾಗಿದ್ದುರು, ಬಿಡಿಎ ಅಧ್ಯಕ್ಷ ಎಸ್​.ಆರ್​ ವಿಶ್ವನಾಥ್ ಮತ್ತು ಸೊಲದೇವನಹಳ್ಳಿ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ABOUT THE AUTHOR

...view details