ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ವಿಜಯದಶಮಿ ಸಡಗರ ಸಂಭ್ರಮಕ್ಕೆ ವರ್ಷಧಾರೆಯೊಂದಿಗೆ ತೆರೆ ಎಳೆಯಲಾಯಿತು.
ಸಿಲಿಕಾನ್ ಸಿಟಿಯಲ್ಲಿ ವರ್ಷಧಾರೆಯೊಂದಿಗೆ ವಿಜಯದಶಮಿ ಸಂಭ್ರಮಕ್ಕೆ ತೆರೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರ್ಷಧಾರೆಯೊಂದಿಗೆ ವಿಜಯದಶಮಿ ಸಡಗರ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.
ದಸರಾ ಹಬ್ಬದ ಕಡೆಯ ದಿನವಾದ ಇಂದು ವಿಜಯದಶಮಿ ಅಂಗವಾಗಿ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಸ್ಕಾನ್ ವತಿಯಿಂದ ಸಂಗೀತ ಕಾರ್ಯಕ್ರಮ ಹಾಗು ರಾವಣವಧೆ ಅಣಕು ಪ್ರದರ್ಶನ ನಡೆಸಲಾಯಿತು. ಸಂಜೆ ಗಾಯಕ ವಿಜಯಪ್ರಕಾಶ್ ಮತ್ತು ತಂಡದ ಭಜನೆ ಮತ್ತು ಭಕ್ತಿಸುಧೆ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ನಂತರ ಸುರಿದ ಮಳೆಯ ನಡುವೆಯೂ 25 ಅಡಿಗೂ ಎತ್ತರದ ರಾವಣ ಮತ್ತು ಕುಂಭಕರ್ಣನ ಸಂಹಾರ ನಡೆಸಲಾಯ್ತು. ಈ ಸನ್ನಿವೇಶ ನೋಡಲು ಜನ ಮಳೆಯನ್ನು ಲೆಕ್ಕಿಸದೇ ಕಾತರದಿಂದ ಕಾದು ಕುಳಿತಿದ್ದರು. ನಂತರ ಮಳೆಯ ನಡುವೆಯೇ ರಾವಣ ದಹನ ನಡೆಸಲಾಯಿತು. ಮಳೆಯಿಂದಾಗಿ ಅಂತಿಮ ಹಂತದ ಕಾರ್ಯಕ್ರಮ ಅಂದುಕೊಂಡಂತೆ ಆಗದಿದ್ರೂ ಹಬ್ಬದ ಸಡಗರಕ್ಕೇನು ಕೊರತೆ ಇರಲಿಲ್ಲ.
ರಾವಣ ದಹನದ ನಂತರ ಜಯಘೋಷಗಳನ್ನು ಕೂಗಿದ ಭಕ್ತ ಸಮೂಹ ಸಂಭ್ರಮದಿಂದಲೇ ಈ ಬಾರಿಯ ವಿಜಯ ದಶಮಿಗೆ ವಿದಾಯ ಹೇಳಿತು.