ಬೆಂಗಳೂರು : ನಕಲಿ ಐಡಿ ಕಾರ್ಡ್ ತೋರಿಸಿ ಸೈಬರ್ ಕ್ರೈಮ್ ಪೋಲಿಸರಿಗೇ ಆವಾಜ್ ಹಾಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಖಿಲ್ ಕುಮಾರ ಮತ್ತು ಮಹೇಂದ್ರ ಕುಮಾರ ಬಂಧಿತ ಆರೋಪಿಗಳು.
ಪೊಲೀಸ್ ತನಿಖೆಗೆ ಅಡ್ಡಿ ಪಡಿಸಿದ್ದ ನಕಲಿ ಮಾನವ ಹಕ್ಕುಗಳ ಅಧಿಕಾರಿಗಳು ಅಂದರ್! - Kannada news
ನಕಲಿ ಐಡಿ ಕಾರ್ಡ್ ತೋರಿಸಿ ಸೈಬರ್ ಕ್ರೈಂ ಪೋಲಿಸರಿಗೆ ಆವಾಜ್ ಹಾಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದರೆಡು ದಿನಗಳ ಹಿಂದೆ ಸೈಬರ್ ಕ್ರೈಮ್ ಪೊಲೀಸ್ ಕಚೇರಿಗೆ ನುಗ್ಗಿ ತಮ್ಮ ಹಳೇ ಕೇಸಿನ ವಿಚಾರವಾಗಿ ಮಾಹಿತಿ ಕೇಳಿದ್ದಾರೆ. ಆಗ ಕರ್ತವ್ಯನಿರ್ವಹಿಸಿಸುತ್ತಿದ್ದ ಪಿಸಿ, ಇನ್ಸ್ ಪೆಕ್ಟರ್ ಬಂದ ಮೇಲೆ ಬರುವಂತೆ ಹೇಳಿದ್ದಾರೆ. ಆಗ ನಾವು ಹ್ಯೂಮನ್ ರೈಟ್ಸ್ ಅಧಿಕಾರಿಗಳೆಂದು ದಮ್ಕಿ ಹಾಕಿದ್ದಾರೆ. ಈ ವಿಚಾರವಾಗಿ ಸೈಬರ್ ಕ್ರೈಮ್ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.
ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಡಿಸಿಪಿ ದೇವರಾಜ್ ಸೈಬರ್ ಠಾಣೆಯಲ್ಲಿ ಐದು ಸಾವಿರ ಆನ್ ಲೈನ್ ಟ್ರಾಂಜಾಕ್ಷನ್ ಕುರಿತು ದೂರು ನೀಡಿದ್ರು. ಈ ಕುರಿತು ತನಿಖೆಯ ಪಗ್ರತಿ ವಿಚಾರಿಸಲು ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಇವರನ್ನು ಬಂಧಿಸಿ ನಕಲಿ ಹ್ಯೂಮನ್ ರೈಟ್ಸ್ ಐಡಿ ಕಾರ್ಡ್ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.