ನೆಲಮಂಗಲ:ಇಂದು ರಾಜ್ಯಾದ್ಯಂತ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಜನರು ಮಾಸ್ಕ್ ಧರಿಸಿ, ಮತಗಟ್ಟೆಗಳಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಿ ಹೋಗುತ್ತಿದ್ದಾರೆ. ಎಲ್ಲರೂ ಬಂದು ತಪ್ಪದೆ ಮತ ಚಲಾಯಿಸಿ ಎಂದು ಸೆಲಬ್ರಿಟಿಗಳು ಹಾಗೂ ರಾಜಕೀಯ ಗಣ್ಯರು ಜನರ ಬಳಿ ಮನವಿ ಮಾಡುತ್ತಿದ್ದಾರೆ.
ನೆಲಮಂಗಲದಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ
ನೆಲಮಂಗಲದ ಮೈಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ಬಂದು ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಮತದಾನ ಮಾಡಿದ್ದಾರೆ. ಎಲ್ಲರೂ ತಪ್ಪದೆ ಬಂದು ಮತದಾನ ಮಾಡುವಂತೆ ಲೀಲಾವತಿ ಹಾಗೂ ವಿನೋದ್ ರಾಜ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಡಾ.ಶಿವಮೂರ್ತಿ ಮುರುಘಾ ಶರಣರಿಂದ ಮತದಾನ
ಹಿರಿಯ ನಟಿ ಲೀಲಾವತಿ ಕೂಡಾ ಇಂದು ಮತದಾನ ಮಾಡಿದ್ದಾರೆ. ಬೆಂಗಳೂರಿನ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಗೆ ಪುತ್ರ ವಿನೋದ್ ರಾಜ್ ಅವರೊಂದಿಗೆ ಬಂದು ಮತದಾನ ಮಾಡಿದರು. ವಿನೋದ್ ರಾಜ್, ತಾಯಿಗೆ ಮತದಾನ ಮಾಡಲು ಸಹಾಯ ಮಾಡಿದರು. ಮತ ಚಲಾಯಿಸಿದ ಲೀಲಾವತಿ ಹಾಗೂ ವಿನೋದ್ ರಾಜ್, ಸಂಜೆವರೆಗೂ ಸಮಯ ಇದೆ. ಯಾರೂ ಮತ ಹಾಕುವುದನ್ನು ಮಿಸ್ ಮಾಡಿಕೊಳ್ಳಬೇಡಿ, ಮತಗಟ್ಟೆಗೆ ಬಂದು ಮತ ಚಲಾಯಿಸಿ ಎಂದು ಮನವಿ ಮಾಡಿದರು. ಮೈಲನಹಳ್ಳಿಯ ಬಳಿಯ ಸೊಲದೇವನಹಳ್ಳಿಯ ತೋಟದ ಮನೆಯಲ್ಲಿ ನಟಿ ಲೀಲಾವತಿ, ತಮ್ಮ ಪುತ್ರ ವಿನೋದ್ ರಾಜ್ ಅವರೊಂದಿಗೆ ವಾಸವಾಗಿದ್ದಾರೆ.