ಬೆಂಗಳೂರು: ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ವೆಂಚುರೈಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹೊಸ ಅನ್ವೇಷಣೆ ಮಾಡಿದ ಸ್ಟಾರ್ಟ್‌ಅಪ್ ಕಂಪನಿಗಳಿಗೆ, ಹೊಸ ಕಲ್ಪನೆಯ ನವೋದ್ಯಮ ಸಂಸ್ಥೆಗಳಿಗೆ ಸರ್ಕಾರದಿಂದ ಉತ್ತೇಜನ ನೀಡುವ ಸಲುವಾಗಿ ಪ್ರಶಸ್ತಿ ನೀಡಲಾಯಿತು.
40 ಲಕ್ಷ ರೂ.ಗಳ ನಗದು ಪುರಸ್ಕಾರ ಹೊಂದಿದ ಮೊದಲ ಬಹುಮಾನವನ್ನು ದೇವಿಕ್ ಅರ್ಥ್ ಪ್ರೈ.ಲಿ, 24 ಲಕ್ಷ ರೂ.ಗಳ ನಗದು ಪುರಸ್ಕಾರ ಹೊಂದಿದ ಎರಡನೇ ಬಹುಮಾನ ಸುಜ್ಹಿಯಮ್ ಇಂಡಸ್ಟ್ರಿಯಲ್ ಪ್ರೈ.ಲಿ, 8 ಲಕ್ಷ ರೂ.ಗಳ ನಗದು ಪುರಸ್ಕಾರ ಹೊಂದಿದ ಮೂರನೇ ಬಹುಮಾನವನ್ನು ಬನಶ್ರೀ ರಿನಿವಬಲ್ ಎನೆರ್ಜಿ ಕಂಪನಿ ಮತ್ತು ಸೆಲ್ಪ್ರೋ ಪ್ರೈ.ಲಿ ಜಂಟಿಯಾಗಿ ಪಡೆದುಕೊಂಡವು.