ಬೆಂಗಳೂರು:ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಯ್ತು... ಇದೀಗ ದಿನಬಳಕೆ ವಸ್ತುಗಳ ಬೆಲೆ ಮಿತಿಮೀರಿ ಹೆಚ್ಚಾಗುತ್ತಿದ್ದು, ದಿನಗೂಲಿ ಮಾಡುವ ಕಾರ್ಮಿಕರಿಂದ ಹಿಡಿದು ಮಧ್ಯಮ ವರ್ಗದವರಿಗೆ ಬಿಸಿ ತುಪ್ಪದಂತಾಗಿದೆ.
ಕಳೆದೆರಡು ವರ್ಷಗಳಿಂದ ಕೊರೊನಾ ಬೀರಿದ ಆರ್ಥಿಕ ಪರಿಣಾಮದಿಂದ ಜನತೆ ಕೊಂಚ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಅಗತ್ಯ ವಸ್ತಗಳ ಬೆಲೆ ಏರಿಕೆಯಾಗಿರುವುದು ಮತ್ತಷ್ಟು ಹೊಡೆತ ಬೀರಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ಪರಿಣಾಮ ಅಗತ್ಯ ವಸ್ತುಗಳ ಬೆಲೆಯೂ ಅಧಿಕವಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಅಗತ್ಯ ವಸ್ತುಗಳನ್ನು ತರುವಾಗ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರಿಂದ ಅವುಗಳನ್ನು ಸಾಗಣೆ ಮಾಡಲು ವಾಹನಗಳಿಗೆ ಪೆಟ್ರೋಲ್ ಡಿಸೇಲ್ ಹಾಕಿಸಲೇ ಬೇಕು.
ಇದರಿಂದ ದೈನಂದಿನ ಸಾಮಗ್ರಿಗಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಲವೆಡೆ ಮಳೆಯಾಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತದೆ. ಆದರೆ, ಇದು ತಾತ್ಕಾಲಿಕವಾಗಿ ಪರಿಣಾಮ ಬಿರುತ್ತದೆ. ವಿನಃ ದಿನಸಿ ಸಾಮಗ್ರಿ ಇದಕ್ಕಿಂತ ಹೆಚ್ಚು ಏರಿಕೆ ಆಗಲಿದೆ ಎಂದು ಎಪಿಎಂಸಿಯ ಕಾರ್ಮಿಕ ಸಂಘದ ಅಧ್ಯಕ್ಷ ಅರುಣ್ ಪರಮೇಶ್ ಹೇಳಿದರು.