ಬೆಂಗಳೂರು: ನಗರದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 600ಕ್ಕೆ ತಲುಪಿದೆ. ಕೊರೊನಾ ಸೋಂಕು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಡಿದ್ರೆ ನಗರದ ಓಪನ್ ಜಾಗಗಳನ್ನು ಫೀಲ್ಡ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.
ಇದಕ್ಕಾಗಿ ಕಂಠೀರವ ಸ್ಟೇಡಿಯಂ, ತ್ರಿಪುರವಾಸಿನಿ ಚೌಲ್ಟ್ರಿ, ವೈಟ್ ಫೀಲ್ಡ್ನ ಎಕ್ಸಿಬಿಷನ್ ಹಾಲ್ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಂದೆಡೆ ಕೊರೊನಾ ಸೋಂಕು ಪರೀಕ್ಷೆಯ ವರದಿ ಬೇಗ ತಿಳಿಯುತ್ತಿಲ್ಲ. ಹಾಗಾಗಿ ಶಂಕಿತ ವ್ಯಕ್ತಿ ವರದಿ ಬರುವ ತನಕ ಓಡಾಡಿ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಈ ವಿಚಾರ ಸಚಿವರ ಗಮನಕ್ಕೆ ತರಲಾಗಿದೆ. ರೋಗಿಗಳು ಕೂಡ ಮನೆ ವಿಳಾಸ, ಫೋನ್ ನಂಬರ್ ಸರಿಯಾಗಿ ಕೊಟ್ಟಿರುವುದಿಲ್ಲ. ಪಾಸಿಟಿವ್ ವರದಿ ಬಂದ ಮೇಲೂ ಆಸ್ಪತ್ರೆಗೆ ಸೇರಿಸುವುದು ಒಂದೆರಡು ದಿನ ತಡವಾಗ್ತಿದೆ. ಇದಕ್ಕಾಗಿ ಸೋಂಕು ಪರೀಕ್ಷೆ ನಡೆಸಿದ ವ್ಯಕ್ತಿಗೆ ಸಂದೇಶ ಹೋಗುವ ವ್ಯವಸ್ಥೆ ಆಗಬೇಕು. ಪಾಸಿಟಿವ್ ಎಂದು ಮೆಸೇಜ್ ಕಳಿಸಿದರೆ ಸೋಂಕಿತ ವ್ಯಕ್ತಿಯೇ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.