ಬೆಂಗಳೂರು :ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅನೇಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ನಕಲಿ ಸಬ್ ಇನ್ಸ್ಪೆಕ್ಟರ್, ಉಪ್ಪಾರಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉತ್ತರಕರ್ನಾಟಕ ಮೂಲದ ಅನಿಲ್ ನರಸಿಂಹರಾವ್ ಕುಲಕರ್ಣಿ ಎಂಬಾತ ಬಂಧಿತ ಆರೋಪಿ. ಈತ ಪೊಲೀಸ್ ಹೆಲ್ಮೆಟ್ ಮತ್ತು ಖಾಕಿ ಪ್ಯಾಂಟ್ ಧರಿಸಿಕೊಂಡು ಮೆಜೆಸ್ಟಿಕ್ ಸುತ್ತಮುತ್ತ ತಿರುಗಾಡುತ್ತಾ ತನ್ನನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಸಾರ್ವಜನಿಕರಿಗೆ ಪರಿಚಯಿಸಿಕೊಂಡು ನಮ್ಮ ಇಲಾಖೆಯಲ್ಲಿ ಕೆಲಸ ಖಾಲಿಯಿದೆ. ಭರ್ತಿ ಮಾಡಲು ನನಗೆ ಸೂಚಿಸಿದ್ದಾರೆ. ನೀವು ಸ್ವಲ್ಪ ಹಣ ಕೊಟ್ಟರೆ ನಿಮಗೆ ಕೆಲಸ ಕೊಡುವುದಾಗಿ ನಂಬಿಸುತ್ತಿದ್ದನು.