ಪಾದರಾಯನಪುರ ಘಟನೆ ದುರಾದೃಷ್ಟಕರ, ಅಪರಾಧಿಗಳನ್ನು ಮಟ್ಟ ಹಾಕುತ್ತೇವೆ: ಸಚಿವ ಆರ್.ಅಶೋಕ್ - ಪಾದರಾಯನಪುರದಲ್ಲಿ ನಡೆದ ಘಟನೆ
ಪಾದರಾಯನಪುರ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ನಿಮ್ಮ ಕುಟುಂಬ ಹಾಗೂ ನಿಮ್ಮನ್ನು ರಕ್ಷಣೆ ಮಾಡಲು ಬರುವವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುವುದು, ಹೊಡೆಯಲು ಯತ್ನಿಸುವುದು ರಾಕ್ಷಸ ಪ್ರವೃತ್ತಿ. ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬೆಂಗಳೂರು:ಪಾದರಾಯನಪುರದಲ್ಲಿ ನಡೆದ ಘಟನೆ ದುರಾದೃಷ್ಟಕರ, ಇಂತವರನ್ನು ಪ್ರಾರಂಭದಲ್ಲೇ ಮಟ್ಟ ಹಾಕುವ ಕೆಲಸ ಆಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಸರ್ಕಾರದ ಸ್ವತ್ತನ್ನು ನಾಶ ಮಾಡುವ ಪ್ರಯತ್ನ ಮಾಡುವ ಮೂಲಕ ಗೂಂಡಾಗಿರಿ ವರ್ತನೆ ತೋರುತ್ತಿದ್ದಾರೆ. ಸರ್ಕಾರ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ನಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ನಿಮ್ಮ ಕುಟುಂಬ ಹಾಗೂ ನಿಮ್ಮನ್ನು ರಕ್ಷಣೆ ಮಾಡಲು ಬರುವವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುವುದು, ಹೊಡೆಯಲು ಯತ್ನಿಸುವುದು ರಾಕ್ಷಸ ಪ್ರವೃತ್ತಿ ಎಂದು ಕಿಡಿ ಕಾರಿದರು.