ಬೆಂಗಳೂರು: ವೀಸಾ ಅವಧಿ ಮುಗಿದರೂ ನಗರದಲ್ಲೇ ಇದ್ದು ನಕಲಿ ಅಮೆರಿಕನ್ ಡಾಲರ್ ದಂಧೆ ನಡೆಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್ನಲ್ಲಿ ಕ್ಯಾಮರೋನ್ ದೇಶದ ಇಬ್ಬರು ತಂಗಿದ್ದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಮೆಡಿಕಲ್ ಅಟೆಂಡರ್ ಹೆಸರಿನಲ್ಲಿ ವೀಸಾ ಪಡೆದಿದ್ದ, ಆದರೆ ವೀಸಾ ಅವಧಿ ಮುಗಿದರೂ ದೇಶ ಬಿಟ್ಟು ಹೋಗಿರಲಿಲ್ಲ. ಮತ್ತೋರ್ವನ ಬಳಿ ಯಾವುದೇ ದಾಖಲೆ ಇರಲಿಲ್ಲ.