ಕರ್ನಾಟಕ

karnataka

ETV Bharat / state

ಡ್ರಗ್ಸ್ ದಂಧೆ, ಇಬ್ಬರ ಸೆರೆ : 6 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಜಪ್ತಿ - ಹ್ಯಾಶಿಶ್ ಆಯಿಲ್ ವಶ

ಆರೋಪಿಗಳು ವಿಚಾರಣೆ ವೇಳೆ ಹೊಸ ವರ್ಷದ ಪಾರ್ಟಿಗಳಲ್ಲಿ ಬರುವ ಯುವಕ-ಯುವತಿಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನ ಟಾರ್ಗೆಟ್ ಮಾಡಿ ವಿಲಾಸಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ‌..

two-accused-arrest-in-bengaluru
ಹ್ಯಾಶಿಶ್ ಆಯಿಲ್ ಜಪ್ತಿ

By

Published : Dec 22, 2021, 7:11 PM IST

Updated : Dec 22, 2021, 7:29 PM IST

ಬೆಂಗಳೂರು : ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ನಗರದಲ್ಲಿ ಹ್ಯಾಶಿಶ್ ಆಯಿಲ್ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಪ್ರಕಾಶ್ ಮತ್ತು ಧ್ಯಾಮ್ ರಾಜ್ ಒಡಿಶಾದಿಂದ ಹ್ಯಾಶಿಶ್​ ಆಯಿಲ್ ಖರೀದಿಸಿ ಬೆಂಗಳೂರಿನ ಅಪಾರ್ಟ್​ಮೆಂಟ್‌ವೊಂದರಲ್ಲಿ ಶೇಖರಿಸಿಟ್ಟಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮೈಕೊಲೇಔಟ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. 6 ಕೋಟಿ ಬೆಲೆಬಾಳುವ 5 ಕೆಜಿ ಹ್ಯಾಶಿಶ್ ಆಯಿಲ್ ಮತ್ತು 1 ಕೆಜಿ 500 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ವಿಚಾರಣೆ ವೇಳೆ ಹೊಸ ವರ್ಷದ ಪಾರ್ಟಿಗಳಲ್ಲಿ ಬರುವ ಯುವಕ-ಯುವತಿಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನ ಟಾರ್ಗೆಟ್ ಮಾಡಿ ವಿಲಾಸಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ‌.

ಓದಿ:ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಆಯುಕ್ತರ ಮೇಲೆಯೇ ಹಲ್ಲೆ ಆರೋಪ

Last Updated : Dec 22, 2021, 7:29 PM IST

ABOUT THE AUTHOR

...view details