ಕರ್ನಾಟಕ

karnataka

ETV Bharat / state

ಬಿಬಿಎಂಪಿ-ಬೆಸ್ಕಾಂಗೆ 'ಶಾಕ್‌'ಟ್ರೀಟ್ಮೆಂಟ್‌ ಕೊಡುವವರು ಯಾರು? ಸಾಲು ಸಾಲು ದುರಂತಗಳಿಂದಲೂ ಬುದ್ಧಿ ಬಂದಿಲ್ಲ..

ನಗರದಲ್ಲಿ ಇನ್ನೂ ಅನೇಕ ವಿದ್ಯುತ್ ಕಂಬಗಳು ಸಾವಿಗಾಗಿ ಬಾಯಿ ತೆರೆದಂತಿವೆ. ವಿದ್ಯಾರಣ್ಯಪುರದ ಬಳಿ ಸಾಕಷ್ಟು ವಿದ್ಯುತ್ ಕಂಬಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ವಿದ್ಯುತ್ ತಂತಿಗಳು ಬಾಯ್ತೆರೆದು ನಿಂತಿವೆ ಎಂದು ಕಳೆದ ಫೆಬ್ರವರಿಯಲ್ಲಿಯೇ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಬಿಬಿಎಂಪಿ-ಬೆಸ್ಕಾಂ

By

Published : May 7, 2019, 8:24 AM IST

ಬೆಂಗಳೂರು:ಬಿಬಿಎಂಪಿ ನಿರ್ಲಕ್ಷ್ಯವೋ ಅಥವಾ ಬೆಸ್ಕಾಂನ ಬೇಜವಾಬ್ದಾರಿಯೋ ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಪಾರ್ಕ್​ನಲ್ಲಿ ಆಟವಾಡುತ್ತಾ ಇದ್ದ ಮಗು ಕರೆಂಟ್ ಶಾಕ್​ನಿಂದ ಸಾವನಪ್ಪಿತ್ತು. ಮತ್ತೊಂದು ಮಗು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದಿದೆ. ಇಷ್ಟೆಲ್ಲಾ ಅವಘಡಗಳು ನಡೆದ್ರೂ ಪಾಲಿಕೆ ಹಾಗೂ ಬೆಸ್ಕಾಂ ಮಾತ್ರ ಎಚ್ಚೆತ್ತಿಲ್ಲ.

ಇದೆಲ್ಲ ನಡೆದು ಹೋದದ್ದು ಒಂದು ತಿಂಗಳ ಅಂತರದಲ್ಲಿ. ವಿದ್ಯುತ್ ಕಂಬಗಳನ್ನು ಹಾಗೂ ತಂತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂತಹ ದುರಂತಗಳನ್ನು ತಪ್ಪಿಸಬಹುದಾಗಿತ್ತು. ಆದರೆ, ದುರಂತಗಳ ಹೊಣೆ ಹೊರೋದಕ್ಕೆ ಮಾತ್ರ ಯಾವ ಇಲಾಖೆಯೂ ಸಿದ್ಧವಿಲ್ಲದೇ ಇರೋದು ಮಾತ್ರ ವಿಪರ್ಯಾಸವೇ ಸರಿ. ಹೊಣೆ ಹೊರುವುದಿರಲಿ, ಎಚ್ಚೆತ್ತಿವೆಯಾ ಅಂತಾ ನೋಡಿದ್ರೇ ಅದೂ ಸಹ ಇಲ್ಲ.

ಸಾಲು ಸಾಲು ದುರಂತ ನಡೆದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ-ಬೆಸ್ಕಾಂ

ನಗರದಲ್ಲಿ ನಡೆದ ಇವೆರಡು ಘಟನೆಗಳಿಂದ ಬೆಸ್ಕಾಂ ಎಚ್ಚೆತ್ತಿಲ್ಲ. ಅಲ್ಲದೇ ನಗರದಲ್ಲಿ ಇನ್ನೂ ಅನೇಕ ವಿದ್ಯುತ್ ಕಂಬಗಳು ಸಾವಿಗಾಗಿ ಬಾಯಿ ತೆರೆದಂತಿವೆ. ವಿದ್ಯಾರಣ್ಯಪುರದ ಬಳಿ ಸಾಕಷ್ಟು ವಿದ್ಯುತ್ ಕಂಬಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ವಿದ್ಯುತ್ ತಂತಿಗಳು ಬಾಯ್ತೆರೆದು ನಿಂತಿವೆ ಎಂದು ಕಳೆದ ಫೆಬ್ರವರಿಯಲ್ಲಿಯೇ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನ ಕೇಳಿದ್ರೆ, ನಾವು ಈಗಾಗಲೇ ಕೆಲವು ಕಡೆಗಳಲ್ಲಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗ ನಡೆದಿರುವ ಎರಡೂ ಪ್ರಕರಣಗಳ ಹೊಣೆಯನ್ನ ಪಾಲಿಕೆ ಹೊರಬೇಕಾಗುತ್ತದೆ. ಪಾರ್ಕ್ ಹಾಗೂ ಬೀದಿ ದೀಪಗಳ ನಿರ್ವಹಣೆ ನಮ್ಮದಲ್ಲ. ಎಲ್ಲವೂ ಒಮ್ಮೆಲೆ ಮಾಡಲು ಸಾಧ್ಯವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಜವಾಬ್ದಾರಿ ಹೊರಬೇಕಾದ ಇಲಾಖೆಗಳು ಮಾತ್ರ ತಮ್ಮ ಹೊಣೆಗಾರಿಕೆಯಿಂದ ನುಣುಚಿ ಕೊಳ್ತಾ ಇವೆ. ಜೊತೆಗೆ ಜನಸಾಮಾನ್ಯರ ಜೀವದ ಜೊತೆಯೂ ಚೆಲ್ಲಾಟವಾಡ್ತಿವೆ.

ABOUT THE AUTHOR

...view details