ಕರ್ನಾಟಕ

karnataka

ETV Bharat / state

ಟೊಯೊಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಎಸ್ ಕಿರ್ಲೋಸ್ಕರ್ ನಿಧನ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಎಸ್ ಕಿರ್ಲೋಸ್ಕರ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

vikram s kirloskar dies
ವಿಕ್ರಮ್ ಎಸ್ ಕಿರ್ಲೋಸ್ಕರ್

By

Published : Nov 30, 2022, 8:43 AM IST

Updated : Nov 30, 2022, 10:39 AM IST

ಬೆಂಗಳೂರು: ಆಟೋಮೊಬೈಲ್ ಕ್ಷೇತ್ರದ ಸಾಧಕ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷರಾದ ವಿಕ್ರಮ್ ಎಸ್ ಕಿರ್ಲೋಸ್ಕರ್ (64) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳವಾರ ರಾತ್ರಿ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಕ್ರಮ್ ಕಿರ್ಲೋಸ್ಕರ್ ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಿರ್ಲೋಸ್ಕರ್ ಗುಂಪಿನ ನಾಲ್ಕನೇ ತಲೆಮಾರಿನ ಮುಖ್ಯಸ್ಥರಾಗಿದ್ದರು. ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದರು.

ಇದನ್ನೂ ಓದಿ:ಟೊಯೋಟಾ 'ಗ್ಲಾಂಜಾ' ಹೊಸ ಆವೃತ್ತಿ ಬುಕ್ಕಿಂಗ್​ ಆರಂಭ.. ಕೇವಲ ₹11 ಸಾವಿರ ಪಾವತಿಸಿ ಕಾರು ನಿಮ್ಮದಾಗಿಸಿಕೊಳ್ಳಿ!

ವಿಕ್ರಮ್ ಎಸ್ ಕಿರ್ಲೋಸ್ಕರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬೆಂಗಳೂರು ಪ್ರಧಾನ ಕಚೇರಿಯ ಬಯೋಫಾರ್ಮಾಸ್ಯುಟಿಕಲ್ಸ್ ಕಂಪನಿ ಬಯೋಕಾನ್​ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್ ಶಾ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. 'ವಿಕ್ರಮ್ ಅವರು ಆತ್ಮೀಯ ಸ್ನೇಹಿತರಾಗಿದ್ದರು, ಅವರ ನಿಧನ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ದೇವರು ನೋವು ಮತ್ತು ದುಃಖವನ್ನು ಭರಿಸುವ ಶಕ್ತಿ ನೀಡಲಿ' ಎಂದು ತಿಳಿಸಿದ್ದಾರೆ. 'ವಿಕ್ರಮ್ ಅವರ ಅಕಾಲಿಕ ಮರಣವನ್ನು ತಿಳಿಸಲು ನಾವು ತುಂಬಾ ದುಃಖಿತರಾದ್ದು, ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲೆಂದು' ಕಂಪನಿಯು ಕಂಬನಿ ಮಿಡಿದಿದೆ.

ಹೆಚ್‌ಡಿಕೆ ಸಂತಾಪ:

ಇದನ್ನೂ ಓದಿ:ಟೊಯೋಟಾ 'ಗ್ಲಾಂಜಾ' ಹೊಸ ಆವೃತ್ತಿ ಬುಕ್ಕಿಂಗ್​ ಆರಂಭ.. ಕೇವಲ ₹11 ಸಾವಿರ ಪಾವತಿಸಿ ಕಾರು ನಿಮ್ಮದಾಗಿಸಿಕೊಳ್ಳಿ!

Last Updated : Nov 30, 2022, 10:39 AM IST

ABOUT THE AUTHOR

...view details