ಬೆಂಗಳೂರು:ಬಹುಕೋಟಿ ವಂಚನೆ ಕಂಪನಿಗಳ ವಿರುದ್ಧ ಇತ್ತ ಸಮರ ಸಾರಿದ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಅತ್ತ 12 ವಂಚಕ ಕಂಪನಿಗಳ ಇತಿಹಾಸವನ್ನು ಸಿಸಿಬಿ ಪೊಲೀಸರು ಜಾಲಾಡಿದ್ದಾರೆ. ಆ ಎಲ್ಲ ಟೋಪಿವಾಲಾ ಕಂಪನಿಗಳ ಬಗ್ಗೆ ಮಾಹಿತಿ ಇಲ್ಲಿದೆ.
1) ಐ- ಮಾನಿಟರಿ ಅಡ್ವೈಸರಿ (ಐಎಂಎ) - ಎಸ್ಐಟಿ
ಮೊಹಮ್ಮದ್ ಮನ್ಸೂರ್ ಖಾನ್ ನೇತೃತ್ವದಲ್ಲಿ ಶಿವಾಜಿನಗರದಲ್ಲಿ 2006ರಲ್ಲಿ ಆರಂಭವಾಗಿದ್ದ ಐ-ಮಾನಿಟರಿ ಅಡ್ವೈಸರಿ ಕಂಪನಿ (ಐಎಂಎ) ಸಾರ್ವಜನಿಕರಿಗೆ ತಿಂಗಳಿಗೆ ಶೇ. 8ರಿಂದ 10ರಷ್ಟು ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಹಣ ಸಂಗ್ರಹಿಸಿತ್ತು. 2019ರ ಮಾರ್ಚ್ವರೆಗೂ ಹೂಡಿಕೆದಾರರಿಗೆ ಲಾಭ ನೀಡಿ ಬಳಿಕ ಲಾಭವೂ ನೀಡದೇ, ಅಸಲೂ ನೀಡದೆ ಮಾಲೀಕ ಎಸ್ಕೇಪ್ ಆಗಿದ್ದಾನೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ 21 ಸಾವಿರ ದೂರುಗಳು ದಾಖಲಾಗಿವೆ. 1230 ಕೋಟಿ ರೂ. ಹೂಡಿಕೆಯಾಗಿರುವುದು ಖಚಿತವಾದ ನಂತರ ತನಿಖೆಯ ಹೊಣೆ ಎಸ್ಐಟಿ ಹೆಗಲೇರಿದೆ. ಸದ್ಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ಗಾಗಿ ಶೋಧ ನೆಡೆದಿದ್ದು, ಏಳು ಜನ ನಿರ್ದೇಶಕರು ಎಸ್ಐಟಿ ವಶದಲ್ಲಿದ್ದಾರೆ.
2) ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ - ಸಿಸಿಬಿ ತನಿಖೆ
ಸೈಯ್ಯದ್ ಅಹಮ್ಮದ್ ಫರೀದ್ ಹಾಗೂ ಆತನ ಮಗ ಸೈಯದ್ ಅಫಾಕ್ ಅಹಮ್ಮದ್ 2016ರಲ್ಲಿ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರಂಭಿಸಿದ ಈ ಕಂಪನಿ ಅಸಲಿಗೆ ಶೇ. 15ರಿಂದ 60ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿತ್ತು. ಬಳಿಕ ಲಾಭವೂ ನೀಡದೆ, ಅಸಲೂ ನೀಡದೆ ವಂಚಿಸಿತ್ತು. ವಂಚನೆಯ ಕುರಿತು 6156 ದೂರುಗಳು ಆ್ಯಂಬಿಡೆಂಟ್ ವಿರುದ್ಧ ದಾಖಲಾಗಿದ್ದು, 121 ಕೋಟಿಗೂ ಹೆಚ್ಚು ವಂಚನೆಯಾಗಿರುವ ವಿಚಾರ ಬಯಲಾಗಿದೆ. ಆರೋಪಿಗಳಾದ ಅಹಮ್ಮದ್ ಫರೀದ್ ಹಾಗೂ ಸೈಯದ್ ಅಫಾಕ್ ನಿರೀಕ್ಷಣಾ ಜಾಮೀನು ಪಡೆದಿದ್ದರೆ. ಇರ್ಫಾನ್ ಮಿರ್ಜಾ, ಬಳ್ಳಾರಿ ರಮೇಶ್, ಇನ್ನಿತರ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಆರೋಪಿಗಳ 5.9 ಕೋಟಿ ರೂ. ನಗದು ಹಾಗೂ 50 ಕೋಟಿ ಬೆಲೆಯ ಸ್ಥಿರಾಸ್ತಿ ಜಪ್ತಿಯಾಗಿದ್ದು, ಸಿಸಿಬಿ ತನಿಖೆ ಮುಂದುವರೆದಿದೆ.
3) ಅಜ್ಮೀರಾ ಗ್ರೂಪ್ಸ್ - ಸಿಸಿಬಿ
ಶೇ. 10ರಿಂದ 20ವರೆಗೂ ಬಡ್ಡಿ ಆಸೆ ತೋರಿಸಿ ವಂಚಿಸಿದ್ದ ಅಜ್ಮಿರಾ ಗ್ರೂಪ್ಸ್ ಕಂಪನಿ ವಿರುದ್ಧ 1100 ದೂರುಗಳು ದಾಖಲಾಗಿದ್ದವು. 200 ಕೋಟಿಗೂ ಅಧಿಕ ಹಣ ವಂಚನೆಯಾಗಿದ್ದು, ಪ್ರಮುಖ ಆರೋಪಿಗಳಾದ ತಬ್ರೇಜ್ ಪಾಷಾ, ಅಬ್ದುಲ್ ಪಾಷಾ, ತಬ್ರೇಜ್ ಉಲ್ಲಾ ಸೈಯದ್ ಮುದಾಸೀರ್ ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿದ್ದಾರೆ. ಮತ್ತಿಬ್ಬರಾದ ಸೈಯದ್ ಮುದಾಸಿರ್ ಹಾಗೂ ಫೈರೋಜ್ ಖಾನ್ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೂ 5.31 ಕೋಟಿ ರೂ. ಹಣ ಹಾಗೂ 25 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಜಪ್ತಿಯಾಗಿದ್ದು, ಸಿಸಿಬಿ ತನಿಖೆ ಮುಂದುವರೆದಿದೆ.
4) ಇಜಾಂಜ್ ಇಂಟರ್ ನ್ಯಾಷನಲ್ ಕಂಪನಿ - ಸಿಸಿಬಿ
ಆರ್ಬಿಐ ಅನುಮತಿ ಪಡೆಯದೆ ಜನರಿಂದ ಹಣ ಠೇವಣಿಯಾಗಿರಿಸಿಕೊಂಡು ವಂಚಿಸಿದ್ದ ಕಂಪನಿ ಇದು. ಬೆಂಗಳೂರು ನಗರ ತಹಸೀಲ್ದಾರ್ ದೂರು ನೀಡಿದ್ದ ಬಳಿಕ ಪ್ರಕರಣ ಸಂಬಂಧ ಮಿಸ್ಬಾ ಉದ್ದೀನ್ ಅಲಿಯಾಸ್ ಮುಖಾರಾಂ ಹಾಗೂ ಸುಹೇಲ್ ಅಹಮ್ಮದ್ ಷರೀಫ್ ಬಂಧನವಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದ ಆರೋಪಿಗಳು ಷರತ್ತು ಮೀರಿದ್ದರು. ಕಳೆದ ತಿಂಗಳ 12ರಂದು ಮಿಸ್ಬಾ ಉದ್ದೀನ್ ಬಂಧಿಸಿದ ಸಿಸಿಬಿ ಪೊಲೀಸರು, ಮತ್ತೋರ್ವ ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ. ಆರೋಪಿಗಳ ಚರ ಹಾಗೂ ಸ್ಥಿರಾಸ್ತಿ ಕಲೆಹಾಕುವ ಕಾರ್ಯ ಪ್ರಗತಿಯಲ್ಲಿದೆ.
5) ಮಾರ್ಗೇನೆಲ್ ಕೋ ಆಪರೇಟಿವ್ ಸೊಸೈಟಿ ಲಿ - ಸಿಸಿಬಿ
ಅಧಿಕ ಬಡ್ಡಿ ಆಮಿಷವೊಡ್ಡಿ 9228 ಮಂದಿಯಿಂದ 145 ಕೋಟಿ ವಂಚಿಸಿದ್ದ ಕಂಪನಿಯಾಗಿದೆ. ಆರೋಪಿಗಳಾದ ಇರ್ಫಾನ್ ಪಾಶಾ, ಮುಗ್ಧಮ್ ಫಾತೀಮಾ ಹಾಗೂ ಸಿಬ್ಗಾಟ್ ಉಲ್ಲಾ ಖಾನ್ ನಾಪತ್ತೆಯಾಗಿದ್ದು, ಲಕ್ ಔಟ್ ನೋಟಿಸ್ ಹೊರಡಿಸಲಾಗಿದೆ. ಸದ್ಯ 84 ಲಕ್ಷ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಜಪ್ತಿಗಾಗಿ ಕಾನೂನು ಕಾರ್ಯ ನಡೆಯುತ್ತಿದೆ.
6) ನಾಫಿಯಾ ಅಡ್ವೈವೈಸರಿ ಹಾಗೂ ನಾಫಿಯಾ ಟೂರ್ಸ್ ಕಂಪನಿ