ಬೆಂಗಳೂರು: ಕೋವಿಡ್ ಅಡೆತಡೆಗಳನ್ನ ಮೀರಿ ಇದೀಗ ಸಿಇಟಿ ಪರೀಕ್ಷೆ ನಡೆಸಲು ತಯಾರಿ ನಡೆದಿದೆ. ನಾಳೆ 10:30ಕ್ಕೆ ಜೀವಶಾಸ್ತ್ರ, ಗಣಿತಶಾಸ್ತ್ರ ಪರೀಕ್ಷೆ ನಡೆಯಲಿವೆ. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಮೇಲ್ವಿಚಾರಕರಾಗಿ ಬರುವ ಶಿಕ್ಷಕರು ಈ ವೇಳೆ ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಇನ್ನು ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಊಟದ ವ್ಯವಸ್ಥೆ ಮಾಡಲಾಗುತ್ತೆ. ಹೈಕೋರ್ಟ್ ಅನುಮತಿ ಇದ್ದು, ನಾಳೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆತಂಕವಿಲ್ಲದೇ ಭಾಗವಹಿಸಿ ಎಂದು ಕರೆ ನೀಡಿದ್ದಾರೆ.ಕಂಟೈನ್ಮೆಂಟ್ ಝೋನ್ನಿಂದ ಬರುವವರಿಗೆ ಹಾಲ್ ಟಿಕೆಟ್ ತೋರಿಸಿದರೆ ಕೇಂದ್ರಕ್ಕೆ ಬಿಡಲಾಗುತ್ತೆ. ಜೊತೆಗೆ ಪೋಷಕರು ಬರಲು ಸಹ ಅವಕಾಶವಿದ್ದು, ಸೂಚನೆ ನೀಡಲಾಗಿದೆ. ಹಾಗೊಂದು ವೇಳೆ ತೊಂದರೆಯಾದಲ್ಲಿಹೆಲ್ಪ್ ಲೈನ್: 080 23460460, 080 23564583ನೀಡಲಾಗಿದ್ದು, ಸಂಪರ್ಕಿಸಬಹುದು ಎಂದಿದ್ದಾರೆ.