ಬೆಂಗಳೂರು: ರಾಜ್ಯದಲ್ಲಿಂದು 236 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು 321 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,236 ಇದೆ.
ರಾಜ್ಯದಲ್ಲಿಂದು 236 ಜನರಲ್ಲಿ ಕೋವಿಡ್: ಏಳು ಮಂದಿ ಸೋಂಕಿತರ ಸಾವು - ಕರ್ನಾಟಕ ರಾಜ್ಯದ ಕೋವಿಡ್ ರಿಪೋರ್ಟ್
ಕರ್ನಾಟಕದಲ್ಲಿ ಇಂದು 236 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಏಳು ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್
ಈವರೆಗೆ ಒಟ್ಟು 29,55,138 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 30,00,671 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 38,268 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 121 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. 5,531 ಸಕ್ರಿಯ ಪ್ರಕರಣಗಳಿವೆ.