ಕರ್ನಾಟಕ

karnataka

ETV Bharat / state

ಗೃಹ ಸಚಿವರನ್ನು ಭೇಟಿಯಾದ ಟಿ.ಜೆ ಅಬ್ರಹಾಂ: ಇಂದ್ರಜಿತ್ ಲಂಕೇಶ್ ವಿರುದ್ಧ ದೂರು!

ಹೋಟೆಲ್ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ದಲಿತರ ಹೆಸರನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿ ಟಿ.ಜೆ.ಅಬ್ರಹಾಂ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

TJ Abraham Complaint
ಇಂದ್ರಜಿತ್ ಲಂಕೇಶ್ ವಿರುದ್ಧ ದೂರು

By

Published : Jul 20, 2021, 12:58 PM IST

Updated : Jul 20, 2021, 1:12 PM IST

ಬೆಂಗಳೂರು : ದಲಿತ ಅಲ್ಲದವರನ್ನು ಎತ್ತಿ ಕಟ್ಟಲು ಇಂದ್ರಜಿತ್ ಪ್ರಯತ್ನಪಟ್ಟಿದ್ದಾರೆ ಎಂದು ಸಾಮಾಜಿಕ‌ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ದೂರು ನೀಡಿದ ಬಳಿಕ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ದಲಿತ ಎನ್ನುವ ಪದವನ್ನು ಪದೇ ಪದೆ ಬಳಸಿದ್ದಾರೆ. ಈ ಬಗ್ಗೆ ಗೃಹ ಸಚಿವರನ್ನು ಭೇಟಿಯಾಗಿ ದೂರು ನೀಡಿದ್ದೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ

ದಲಿತ ಸಪ್ಲೈಯರ್ ಮೇಲೆ ಹಲ್ಲೆ ಆಗಿದೆ ಎಂದು ಒತ್ತಿ ಹೇಳಿದ್ದಾರೆ. ಪೊಲೀಸರು ಕಾಂಪ್ರಮೈಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್​ಮೆಂಟ್ ಸ್ಟೇಷನ್ ಎಂದು ಹೇಳಿದ್ದಾರೆ.

ಅಲ್ಲದೆ, ದಲಿತರ ಬಗ್ಗೆ ಬೇರೆ ಸಮುದಾಯದವರಿಗೆ ಕೋಪ ಬರುವಂತೆ ಮಾತನಾಡಿದ್ದಾರೆ. ಇಂದ್ರಜಿತ್ ಅವರಿಂದ ಮೈಸೂರು ಪೊಲೀಸರ ಮಾನ ಮರ್ಯಾದೆ ಹೋಗಿದೆ. ಈ ಕಾರಣಕ್ಕೆ ಇಂದ್ರಜಿತ್ ವಿರುದ್ದ ಗೃಹ ಸಚಿವರಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.

ಇಂದ್ರಜಿತ್ ವಿರುದ್ದ ಮೈಸೂರು ಪೊಲೀಸರು ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಅವರು ಇದೇ ವೇಳೆ ಆಗ್ರಹಿಸಿದರು.

ಓದಿ : ದರ್ಶನ್ ಬೆಂಬಲಿಗರು, ರೌಡಿಗಳು ಸತತವಾಗಿ ಕರೆ ಮಾಡಿ ಬೆದರಿಕೆ ಹಾಕ್ತಿದ್ದಾರೆ: ಇಂದ್ರಜಿತ್ ಲಂಕೇಶ್

Last Updated : Jul 20, 2021, 1:12 PM IST

ABOUT THE AUTHOR

...view details