ಬೆಂಗಳೂರು: ಅಧಿವೇಶನ ಜನರ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ನಡೆಸುವ ವೇದಿಕೆಯಾಗಿದೆ. ಆದರೆ, ಇತ್ತೀಚಿಗಿನ ದಿನಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಸರ್ಕಾರದ ಹಠಮಾರಿತನದಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ.
ಇದೀಗ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವಿನ ಜಟಾಪಟಿಗೆ ಜಂಟಿ ಅಧಿವೇಶನ ಆಹುತಿಯಾಗುತ್ತಿದೆ. ಇದರಿಂದ ಸಾರ್ವಜನಿಕರ ಹಣ ಹಾಗೂ ಅಧಿವೇಶನದ ಉದ್ದೇಶವೂ ವ್ಯರ್ಥವಾಗುತ್ತಿದೆ.
ಸದ್ಯ ಜಂಟಿ ಅಧಿವೇಶನ ನಡೆಯುತ್ತಿದೆ. ಫೆ. 14ರಿಂದ ಪ್ರಾರಂಭವಾಗಿರುವ ಜಂಟಿ ಅಧಿವೇಶನವನ್ನು ಫೆ.25ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಉದ್ದೇಶಿತ 10 ದಿನಗಳ ಜಂಟಿ ಅಧಿವೇಶನ ನಡೆಯುವುದು ಅನುಮಾನವಾಗಿದೆ. ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಇತ್ತ ಆಡಳಿತ ಪಕ್ಷವೂ ಪಟ್ಟು ಬಿಡದೆ ಕಾಂಗ್ರೆಸ್ ಜೊತೆ ಸಂಘರ್ಷಕ್ಕೆ ಇಳಿದಿದೆ. ಆಡಳಿತ ಪಕ್ಷ ಹಾಗೂ ಪ್ರಮುಖ ಪ್ರತಿಪಕ್ಷಗಳ ಜಟಾಪಟಿಯಿಂದ ಸಾರ್ವಜನಿಕರ ಸಮಸ್ಯೆಗಳು, ಅಭಿವೃದ್ಧಿ ಕುಂಠಿತ, ಅನುದಾನ ಕೊರತೆ, ರೈತರ ಸಮಸ್ಯೆ, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಬೇಕಾಗಿದ್ದ ಸದನ ಕಲಾಪ ವ್ಯರ್ಥವಾಗುತ್ತಿದೆ. ಈಗಾಗಲೇ ಜಂಟಿ ಅಧಿವೇಶನದ ಕಲಾಪ ಪ್ರತಿಪಕ್ಷ ಕಾಂಗ್ರೆಸ್ ನ ಪ್ರತಿಭಟನೆ ಹಿನ್ನೆಲೆ ಮೊಟಕುಗೊಳ್ಳುತ್ತಿದೆ. ಬೆಳಗ್ಗಿನ ಎರಡು ತಾಸು ಮಾತ್ರ ಕಲಾಪ ನಡೆಯುತ್ತಿದ್ದು, ಬಳಿಕ ಕಲಾಪವನ್ನು ಮೊಟಕುಗೊಳಿಸಲಾಗುತ್ತಿದೆ.
ಜಂಟಿ ಅಧಿವೇಶನದ ಮೊದಲ ವಾರದ ಕಲಾಪವಂತೂ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ಸಂಘರ್ಷಕ್ಕೆ ಚರ್ಚೆ ನಡೆಯದೇ ಆಹುತಿಯಾಗಿದೆ. ಕೇವಲ ಪ್ರತಿಭಟನೆಗೆ ಸೀಮಿತವಾಗುತ್ತಿರುವ ಕಲಾಪದ ಸಮಯ ವ್ಯರ್ಥವಾಗುತ್ತಿರುವುದರಿಂದ ಸಾರ್ವಜನಿಕರ ಹಣವೂ ಪೋಲಾಗುತ್ತಿದೆ.
ನಾಲ್ಕು ವರ್ಷಗಳ ಕಲಾಪ ಅವಧಿ ಏನಿದೆ?:ಅಧಿವೇಶನಗಳು ಪ್ರತಿಭಟನೆ, ಧರಣಿಗಳಿಗೆ ಸೀಮಿತವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಜನರ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಗಬೇಕಾದ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಜಂಗೀ ಕುಸ್ತಿಗೆ ಮಾತ್ರ ಸೀಮಿತವಾಗುತ್ತಿರುವುದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಲಾಪ ನಡೆದ ಅವಧಿಯ ವಿವರ ಹೀಗಿದೆ.
2018:ಫೆ.5-9/ಫೆ.16-23- 11 ದಿನ- 43.34 ಗಂಟೆ
ಮೇ 25- 1 ದಿನ- 4.7 ಗಂಟೆ
ಮೇ 19- 1 ದಿನ- 3 ಗಂಟೆ
ಜು. 2-13- 12 ದಿನ- 53.05 ಗಂಟೆ
ಡಿ.10-21- 10 ದಿನ- 40.33 ಗಂಟೆ
2019:ಫೆ.6-14- 7 ದಿನ- 14.10 ಗಂಟೆ