ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಬ್ಬರು, ಜೈಲಿನಿಂದಲೇ ಕರೆ ಮಾಡಿ ವ್ಯಾಪಾರಿಯನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿದ್ದುಕೊಂಡೇ ಡೀಲ್: ವಿಚಾರಣಾಧೀನ ಕೈದಿಗಳಿಬ್ಬರಿಂದ ವ್ಯಾಪಾರಿಗೆ ಹಣಕ್ಕಾಗಿ ಬೆದರಿಕೆ ಕರೆ! - Parappana Agrahara Central Prison
ಜೈಲಿನಲ್ಲಿದ್ದುಕೊಂಡೇ ವಿಚಾರಣಾಧೀನ ಕೈದಿಗಳಿಬ್ಬರು ವ್ಯಾಪಾರಿಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿರುವ ಸಿದ್ದರಾಜು ಅಲಿಯಾಸ್ ಸಿದ್ದ ಹಾಗೂ ಮಧು ಅಲಿಯಾಸ್ ಸ್ಲಂ ಎಂಬುವರು, ಜೈಲಿನಿಂದಲೇ ಕರೆ ಮಾಡಿ ಹಣಕ್ಕಾಗಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವ್ಯಾಪಾರಿ ಶಂಕರ್ ಎಂಬುವರು ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿದ್ದರಾಜು ಹಾಗೂ ಮಧು ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ.
ಜೈಲಿಗೆ ಹೋದ ದಿನದಿಂದಲೂ ಆರೋಪಿಗಳು, ಕೆಲ ನಂಬರ್ಗಳಿಂದ ತಮ್ಮ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು. ಆರಂಭದಲ್ಲಿ ಸಿದ್ದರಾಜು ಸಹೋದರನ ಖಾತೆಗೆ ಹಣ ಜಮೆ ಮಾಡಿದ್ದೆ. ಇತ್ತೀಚೆಗೆ, ಪದೇ ಪದೇ ಹಣ ಕೇಳಲಾರಂಭಿಸಿದ್ದರು. ನನ್ನ ಬಳಿ ಹಣವಿಲ್ಲವೆಂದು ಹೇಳಿದ್ದೆ. ನಂತರ ಸಲೂನ್ ಮಾಲೀಕರೊಬ್ಬರ ಜೊತೆ ಮಾತನಾಡಬೇಕು ಫೋನ್ ಕೊಡು ಎಂದಿದ್ದರು. ಹಣ ಇಲ್ಲ ಎಂದು ಹೇಳಿದ್ದ ನನಗೆ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಶಂಕರ್ ದೂರಿನಲ್ಲಿ ಆರೋಪಿಸಿದ್ದಾರೆ.