ಕರ್ನಾಟಕ

karnataka

ETV Bharat / state

ಕೋರ್ಟ್ ಮೊರೆ ಹೋಗಲು ನಿಮಗೆ ಸಲಹೆ ಕೊಟ್ಟವರು ಅವಿವೇಕಿಗಳು : ರಮೇಶ್ ಕುಮಾರ್

ಸಿಎಂ ಬಿಎಸ್‌ವೈ ಉಲ್ಲೇಖಿಸಿ, ನಿಮಗೆ ಏನು ಗ್ರಹಚಾರ? ಪಕ್ಷಾಂತರ, ಅನರ್ಹತೆ, ಅನುದಾನ, ಚುನಾವಣೆ, ಸಚಿವ ಸ್ಥಾನ ಇವೆಲ್ಲವೂ ನಿಮ್ಮ ಮೇಲೆ ಬಿದ್ದಿದೆ. ಈ ವಯಸ್ಸಿನಲ್ಲಿ ಇದನ್ನು ತಡೆದುಕೊಳ್ಳುವುದು ಕಷ್ಟ ಸಾಧ್ಯ. ಆದರೆ, ಡಿ.ಕೆ ಶಿವಕುಮಾರ್ ನಿಮ್ಮ ಪರವಾಗಿ ನಿಂತಿದ್ದಾರೆ. ಇದೇ ಖುಷಿ ಎಂದು ಕಾಲೆಳೆದರು..

ramesh-kumar
ರಮೇಶ್ ಕುಮಾರ್

By

Published : Mar 22, 2021, 8:50 PM IST

ಬೆಂಗಳೂರು :ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಎಂದು ರಮೇಶ್ ಕುಮಾರ್ ಪರೋಕ್ಷವಾಗಿ ಸಚಿವ ಸುಧಾಕರ್​ಗೆ ಟಾಂಗ್ ನೀಡಿದರು.

ಸಿಡಿ ಚರ್ಚೆ ವೇಳೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಅಥವಾ ಹಿತೈಷಿಗಳು ಎಂದು ನಟಿಸಿ ನಿಮ್ಮನ್ನು ಮುಗಿಸಲು ಮಾಡಿದ ಸಂಚು ಎಂದು ಆರೋಪಿಸಿದರು.

ಕೋರ್ಟ್​ಗೆ ಹೋಗಿದ್ದನ್ನು ಸಮಾಜ ಏನು ತಿಳಿದುಕೊಳ್ಳುತ್ತದೆ. ಯಾಕೆ ನ್ಯಾಯಾಲಯಕ್ಕೆ ಹೋದ್ರಿ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಉಲ್ಲೇಖ ಮಾಡಿ ಮಾತನಾಡಿದ ರಮೇಶ್ ಕುಮಾರ್, ನಿಮಗೆ ಏನು ಗ್ರಹಚಾರ? ಪಕ್ಷಾಂತರ, ಅನರ್ಹತೆ, ಅನುದಾನ, ಚುನಾವಣೆ, ಸಚಿವ ಸ್ಥಾನ ಇವೆಲ್ಲವೂ ನಿಮ್ಮ ಮೇಲೆ ಬಿದ್ದಿದೆ. ಈ ವಯಸ್ಸಿನಲ್ಲಿ ಇದನ್ನು ತಡೆದುಕೊಳ್ಳುವುದು ಕಷ್ಟ ಸಾಧ್ಯ. ಆದರೆ, ಡಿ.ಕೆ ಶಿವಕುಮಾರ್ ನಿಮ್ಮ ಪರವಾಗಿ ನಿಂತಿದ್ದಾರೆ. ಇದೇ ಖುಷಿ ಎಂದು ಕಾಲೆಳೆದರು.

ಸದನದಲ್ಲಿ ಸಿಡಿ ಕುರಿತ ಚರ್ಚೆ ನಡೆಯಿತು

ಗುರು ಶಿಷ್ಯರ ನೈತಿಕತೆ ಕಥೆ :ರಮೇಶ್ ಜಾರಕಿಹೊಳಿ‌ ವಿಚಾರವಾಗಿ ಡಿ ಕೆ ಶಿವಕುಮಾರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಡಿ ವಿಚಾರವಾಗಿ ಮಾತನಾಡುವವರಿಗೆ ನೈತಿಕತೆಯೂ ಇರಬೇಕು. ನಾನು ಸಾಚಾನ ಅನ್ನೋದನ್ನು‌ ನೋಡಿಕೊಳ್ಳಬೇಕು. ಮೈಮರೆತು ಮಾತನಾಡಬಾರದು. ಸಾಚಾ ಯಾರು ಅನ್ನೋದನ್ನ ಮನಸಾಕ್ಷಿಗೆ ಒಪ್ಪಿ ಮಾತಾಡಬೇಕು‌ ಎಂದರು.

ಓದಿ:ಬದ್ಮಾಶ್‌ಗಳು ತಾವು ಸಾಚಾ ಎಂದು ತೋರಿಸಿಕೊಳ್ಳಲು ಟ್ರಿಕ್ಸ್ ಬಳಸ್ತಾರೆ.. ರಮೇಶ್‌ಕುಮಾರ್‌ ಮಾತಿನ ತಿವಿತ!

ಇದೇ ವೇಳೆ ಮಧ್ಯಪ್ರವೇಶ ಮಾಡಿದ ರಮೇಶ್ ಕುಮಾರ್, ಗುರು-ಶಿಷ್ಯರ ನಡುವಿನ ಬದ್ಮಾಶ್​​ ಕಥೆ ಹೇಳಿದರು. ತುಂಬಿದ ನದಿ ದಾಟಲು ಯವತಿಯೊಬ್ಬಳು ಗುರುಯೊಬ್ಬರಲ್ಲಿ ವಿನಂತಿ ಮಾಡಿದರು. ಗುರುಗಳು ತಮ್ಮ ಶಿಷ್ಯರಿಗೆ ಯುವತಿಯನ್ನು ನದಿ ದಾಟಿಸುವಂತೆ ಸೂಚಿಸಿದರು. ಅದರಂತೆ ಶಿಷ್ಯರು ಯುವತಿಯನ್ನು ನದಿ ದಾಟಿಸಿದರು.

ಇದಾದ ಬಳಿಕ ಶಿಷ್ಯರೊಂದಿಗೆ ಗುರುಗಳು ಯುವತಿಯನ್ನು ನದಿ ದಾಟಿಸುವಾಗ ಆದ ಅನುಭದ ಬಗ್ಗೆ ಕೇಳಿದರು. ಹೀಗೆ ಕೆಲವು ಬದ್ಮಾಶ್​​​ಗಳು ಇರ್ತಾರೆ ಎಂದು ರಮೇಶ್ ಕುಮಾರ್ ಕಥೆಯೊಂದನ್ನು ಉಲ್ಲೇಖಿಸಿ ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ, ಅದೇ ಬದ್ಮಾಶ್​​ಗಳು ಯಾರು ಅನ್ನೋದು ನನ್ನ ಪ್ರಶ್ನೆ ಎಂದರು.

ABOUT THE AUTHOR

...view details