ಬೆಂಗಳೂರು: ಪರೀಕ್ಷೆಗಳೆಲ್ಲ ಮುಗಿದಾಯಿತು. ಬೇಸಿಗೆ ರಜೆ ಬಂದಾಯಿತು. ಈಗಾಗಲೇ ಮೋಜು ಮಸ್ತಿ ಶುರುವಾಗಿದೆ. ಮಕ್ಕಳು ರಜೆಯ ಜೊತೆಗೆ ಸ್ವಲ್ಪ ಓದು ಸ್ವಲ್ಪ ಮಸ್ತಿ ಮಾಡಲು ವೇದಿಕೆ ಸಿದ್ದವಾಗುತ್ತಿದೆ. ಅಂದಹಾಗೇ, ಬರಪೀಡಿತ ತಾಲೂಕುಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಬೇಸಿಗೆ ರಜಾವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಹಾಗೂ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ನಿರ್ದೇಶಕರ ಸೂಚನೆಯಂತೆ 2018-19ನೇ ಸಾಲಿನಲ್ಲಿ 5 ರಿಂದ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ (ಅಂದರೆ, 2019-20ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ದಾಖಲಾಗುವ) ಮಕ್ಕಳಿಗೆ ಸ್ವಲ್ಪ ಓದು-ಸ್ವಲ್ಪ ಮೋಜು” ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆಯನ್ನು ಆಯೋಜಿಸಲಾಗಿದೆ.