ಬೆಂಗಳೂರು: ಸಚಿವ ರೇವಣ್ಣ ಅವರು ಸುಮಲತಾ ಬಗ್ಗೆ ಹೇಳಿಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಸುದ್ಮಾದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಸ್ನೇಹಿತರು ಟೆಂಪ್ಟ್ ಮಾಡಿದ್ದಕ್ಕೆ ರೇವಣ್ಣ ಆ ರೀತಿ ಹೇಳಿದ್ದಾರೆ. ಮಾಧ್ಯಮದವರು ರೇವಣ್ಣ ಮಾತನಾಡಿರೋದನ್ನ ಕಟ್ ಮಾಡಿದ್ದಾರೆ. ಅವರು ಎಚ್ಚರಿಕೆಯಿಂದ ಉತ್ತರ ಕೊಡಬೇಕಿತ್ತು. ಇಲ್ಲವಾದರೆ ಹೀಗೆ ಮುಜುಗರವಾಗುವ ಸಂದರ್ಭ ಬರುತ್ತೆ ಅಂತೆ ತಿಳಿಸಿದ್ದಾರೆ.
ರೇವಣ್ಣ ಆ ರಿತಿ ಹೇಳಲು ಮಾದ್ಯಮದವರು ಕಾರಣ ಎಂದ ಸಿಎಂ ಯಾರಿಗಾದರು ನೋವಾಗಿದ್ದರೆ ರೇವಣ್ಣನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ನಮ್ಮ ಕುಟುಂಬದಿಂದ ಯಾವ ಹೆಣ್ಣು ಮಕ್ಕಳಿಗೂ ಅವಮಾನ ಮಾಡಿಲ್ಲ, ಮಾಡೋದು ಇಲ್ಲ ಅಂತ ಹೇಳಿದರು.
ನರೇಗಾ ಹಣ ರಾಜ್ಯಕ್ಕೆ ಕೇಂದ್ರ ಬಿಡುಗಡೆ ಮಾಡಿಲ್ಲ:
ನಿನ್ನೆ ಪ್ರಧಾನಮಂತ್ರಿ ಮೋದಿಯನ್ನ ಭೇಟಿ ವಿಚಾರ ಕುರಿತು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ದೆಹಲಿಯ ಕರ್ನಾಟಕ ಭವನದ ಹೊಸ ಕಟ್ಟಡದ ಉದ್ಘಾಟನೆಗಾಗಿ ಹೋದಾಗ ಪ್ರಧಾನಿ ಅವರನ್ನು ಭೇಟಿಯಾಗಿದ್ದೇನೆ. ರಾಜ್ಯ ಸರ್ಕಾರ ಈಗಾಗಲೇ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ರೈತರಿಗೆ ಆದ ಬೆಳೆ ನಷ್ಟ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಭೇಟಿಯಾಗಿದ್ದೇನೆ ಎಂದರು.
ಅಲ್ಲದೆ ಮೊದಲನೇ ಹಂತದಲ್ಲಿ 2000 ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿದ್ದೆವು. ಆದ್ರೆ 949 ಕೋಟಿ ರೂಪಾಯಿ ಕೇಂದ್ರ ಪರಿಹಾರ ಘೋಷಣೆ ಮಾಡಿದ್ದರೂ ಸಹ ರಾಜ್ಯಕ್ಕೆ ಬಂದಿದ್ದು 400 ಕೋಟಿ ಮಾತ್ರ. ನರೇಗಾ ಯೋಜನೆ ಹಣವನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ತಕ್ಷಣ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಭೇಟಿ ಮಾಡಿ ಮನವಿ ಮಾಡಿದ್ದೇವೆ ಅಂತ ಸಿಎಂ ತಿಳಿಸಿದರು.
ಸೀಟು ಹಂಚಿಕೆ ವಿಚಾರ:
ಸೀಟು ಹಂಚಿಕೆ ಬಗ್ಗೆ ಎರಡು ಪಕ್ಷದ ಆಯಾ ನಾಯಕರೇ ಮಾತನಾಡುತ್ತಾರೆ. ಹಂಚಿಕೆ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದೇನೆ. ನಾನು ರಾಜ್ಯದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಸಮಯ ವ್ಯರ್ಥ ಮಾಡದೇ ನನ್ನ ಡ್ಯೂಟಿ ಮಾಡ್ತಿದ್ದೇನೆ ಅಂತ ಕುಮಾರಸ್ವಾಮಿ ತಿಳಿಸಿದರು.
ಇನ್ನು ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ವಾರದಲ್ಲಿ ನಾಮಪತ್ರ ಸಲ್ಲಿಸುವ ಕೆಲಸವೂ ಆರಂಭವಾಗಹುದು. ಆದಷ್ಟು ಬೇಗ ಸೀಟು ಹಂಚಿಕೆ ಆಗಲಿದೆ ಎಂದು ಸಿಎಂ ಹೇಳಿದ್ರು.