ಬೆಂಗಳೂರು: ಮೈತ್ರಿ ಸರ್ಕಾರದ ಪತನದಿಂದ ರಾಜ್ಯದ ಶಾಪ ವಿಮೋಚನೆ ಮಾಡಿದಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಶಾಪ ವಿಮೋಚನೆಯಾಗಿದೆ: ಶೋಭಾ ಕರಂದ್ಲಾಜೆ ಟ್ವೀಟ್ - kannadanews
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆ ಮೈತ್ರಿ ಪಕ್ಷವನ್ನು ಟೀಕಿಸಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.
ರಾಜ್ಯದ ಶಾಪ ವಿಮೋಚನೆ ಮಾಡಿದಂತಾಗಿದೆ
ಅತಿ ಭ್ರಷ್ಟ, ರೈತ ವಿರೋಧಿ, ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದ ಸಮ್ಮಿಶ್ರ ಸರ್ಕಾರದ ದುರಾಡಳಿತವನ್ನು ಜನತೆಯ ಮುಂದೆ ತೆರೆದಿಟ್ಟು ರಾಜ್ಯದ ಶಾಪ ವಿಮೋಚನೆ ಮಾಡಿದ ಹಾಗೂ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿರುವ ನಿಮಗೆಲ್ಲರಿಗೂ ಈ ಪ್ರಜಾಪ್ರಭುತ್ವದ ಗೆಲುವಿನ ಅಭಿನಂದನೆಗಳು ಎಂದು ಟ್ವೀಟ್ ಮೂಲಕ ಮೈತ್ರಿ ಪಕ್ಷವನ್ನು ಟೀಕಿಸಿದ್ದಾರೆ.
ಬನ್ನಿ, ಜತೆಯಾಗಿ ನವಕರ್ನಾಟಕ ನಿರ್ಮಾಣ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಅವರು ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.