ಕರ್ನಾಟಕ

karnataka

ETV Bharat / state

’ಉಗ್ರರು ಎರಡು ಬ್ಯಾಗ್​​​​​​​ನಲ್ಲಿ ಬಾಂಬ್​ ಹಿಡಿದು ಬೆಂಗಳೂರಿಗೆ ಬಂದಿದ್ದಾರೆ’.... ಕರೆ ಮಾಡಿದವ ಅಂದರ್​ - ಬಾಂಬ್ ಹಿಡಿದು ಟೆರರಿಸ್ಟ್ ಬಂದಿದ್ದಾರೆ

ಟೆರರಿಸ್ಟ್ ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಥಿಯೇಟರ್ ಬಳಿ ಬಂದಿದ್ದಾರೆಂದು ಗಣೇಶ್ ಎಂಬ ವ್ಯಕ್ತಿಯೊಬ್ಬ ಸಂಖ್ಯೆ 100ಕ್ಕೆ ಕರೆ ಮಾಡಿದ್ದ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿಯನ್ನ ಬಂಧಿಸುವಲ್ಲಿ ಜೀವನ್ ಭೀಮಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಣೇಶ್

By

Published : Sep 5, 2019, 5:30 PM IST

ಬೆಂಗಳೂರು : ಬೆಂಗಳೂರಿಗೆ ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಬಂದಿದ್ದಾರೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿಯನ್ನ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಗಳು, ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಥಿಯೇಟರ್ ಬಳಿ ಬಂದಿದ್ದಾರೆ ಎಂದು ಗಣೇಶ್ (34) ಎಂಬ ವ್ಯಕ್ತಿ ಸಂಖ್ಯೆ 100ಕ್ಕೆ ಕರೆ ಮಾಡಿದ್ದ. ಈ ಸುದ್ದಿಯ ನಿಜಾಂಶ ಪತ್ತೆ ಹಚ್ಚಲು ತಕ್ಷಣವೇ ಕಾರ್ಯಪ್ರವೃತ್ತರಾದ ಇಲಾಖೆ, ಈ ವಿಷಯವನ್ನ ಜೀವನ್ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಸಲಿಯತ್ತು ಗೊತ್ತಾಗಿದೆ.

ತಕ್ಷಣ ಗಣೇಶನಿಗೆ ಪೊಲೀಸರು‌ ಕರೆ ಮಾಡಿದಾಗ ಮೊಬೈಲ್ ನಂಬರ್​ ಸ್ವಿಚ್ ಆಫ್ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಆರೋಪಿಯನ್ನ ಹುಡುಕಾಟ ನಡೆಸಿ ಗಣೇಶ್​ನನ್ನು ಬಂಧಿಸಿ ಜೀವನ್ ಭೀಮಾನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details