ಬೆಂಗಳೂರು :ಟೆಂಪೋ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಹಲಸೂರು ಗೇಟ್ ಸಂಚಾರಿ ಠಾಣೆಯ ವ್ಯಾಪ್ತಿಯ ಯುನಿಟಿ ಬಿಲ್ಡಿಂಗ್ ಬಳಿ ಬ್ರೇಕ್ ಫೇಲ್ಯೂರ್ ಆಗಿ ಫುಟ್‌ಪಾತ್ ಮೇಲಿನ ಮರಕ್ಕೆ ಟೆಂಪೋ ಗುದ್ದಿದೆ. ಅದೃಷ್ಟವಶಾತ್ ಸಾವು-ನೋವು ಉಂಟಾಗಿಲ್ಲ. ಸಿಟಿ ಮಾರ್ಕೆಟ್ನಿಂದ ಟೌನ್ಹಾಲ್ ದಾಟಿ ಯುನಿಟಿ ಸರ್ಕಲ್ ಬಳಿ ಬರುತ್ತಿರುವಾಗ ಟೆಂಪೋ ಬ್ರೇಕ್ ಫೇಲ್ಯೂರ್ ಆಗಿದೆ.
ನಿಯಂತ್ರಣ ಕಳೆದುಕೊಂಡು ಮುಂದಿದ್ದ ವಾಹನಗಳಿಗೆ ಅಪಘಾತವಾಗುವ ಸಾಧ್ಯತೆಯಿತ್ತು. ಈ ವೇಳೆ ರಸ್ತೆಯ ಎಡಭಾಗಕ್ಕೆ ಸ್ಟೇರಿಂಗ್ ತಿರುಗಿಸಿ ಫುಟ್‌ಪಾತ್ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವನ್ನು ತಪ್ಪಿಸಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.