ಕರ್ನಾಟಕ

karnataka

ETV Bharat / state

ಪುನೀತ್ ಸ್ವಂತ ಸಹೋದರನಂತೆ ಇದ್ದರು.. ಅಪ್ಪು ನೆನೆದು ಭಾವುಕರಾದ ತೆಲುಗು ನಟ ರಾಜೇಂದ್ರ ಪ್ರಸಾದ್​ - ತೆಲುಗು ನಟ ರಾಜೇಂದ್ರ ಪ್ರಸಾದ್

ಪುನೀತ್​ ರಾಜ್​ಕುಮಾರ್​ ಮನೆಗೆ ಇಂದು ಹಿರಿಯ ತೆಲುಗು ನಟ ರಾಜೇಂದ್ರ ಪ್ರಸಾದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುನೀತ್​ ರಾಜ್​ಕುಮಾರ್​ ಮನೆಗೆ ಭೇಟಿ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್
ಪುನೀತ್​ ರಾಜ್​ಕುಮಾರ್​ ಮನೆಗೆ ಭೇಟಿ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್

By

Published : Nov 5, 2021, 12:00 PM IST

Updated : Nov 5, 2021, 12:21 PM IST

ಬೆಂಗಳೂರು :ಇಂದು ಹಿರಿಯ ತೆಲುಗು ನಟ ರಾಜೇಂದ್ರ ಅವರು ಪ್ರಸಾದ್ ಪುನೀತ್​ ರಾಜ್​ಕುಮಾರ್​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪ್ಪು ನೆನೆದು ಭಾವುಕರಾದ ತೆಲುಗು ನಟ ರಾಜೇಂದ್ರ ಪ್ರಸಾದ್​

ಈ ವೇಳೆ ಮಾತನಾಡಿದ ಅವರು, ಪುನೀತ್ ರಾಜ್​​ಕುಮಾರ್ ನನಗೆ ಸ್ವಂತ ಸಹೋದರನಂತೆ ಇದ್ದರು. ಅವರ ನಿಧನದ ಸುದ್ದಿಯನ್ನ ನನಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಒಳ್ಳೆಯ ವ್ಯಕ್ತಿ, ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿಯೇ ದೊಡ್ಡ ಸೂಪರ್ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತು. ಅಪ್ಪು ನಿಧನದಿಂದ ಸ್ಯಾಂಡಲ್​ವುಡ್​ ಮತ್ತು ಟಾಲಿವುಡ್​ ಸಿನಿಮಾ ರಂಗಕ್ಕೆ ಸಾಕಷ್ಟು ನೋವಾಗಿದೆ ಎಂದು ಕಂಬನಿ ಮಿಡಿದರು.

ಅಪ್ಪು ಮೃತಪಟ್ಟ ದಿನ ಅಭಿಮಾನಿಗಳು ಹೆಚ್ಚಾಗಿದ್ರು, ಅದಕ್ಕೆ ಬರಲಿಲ್ಲ. 25 ಲಕ್ಷ ಜನ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದರಲ್ಲೇ ಗೊತ್ತಾಗುತ್ತೆ ಅವರು ಎಂತಹ ವ್ಯಕ್ತಿ ಎಂಬುದು. ನನ್ನ ಸ್ವಂತ ತಮ್ಮ ಹೋಗಿರುವ ಫೀಲ್ ಆಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುವಾಗ ರಾಘಣ್ಣ ಮಗನ ಮದುವೆಗೆ ಆಮಂತ್ರಣ ನೀಡಿದ್ದರು ಎಂದು ರಾಜೇಂದ್ರ ಪ್ರಸಾದ್​ ಭಾವುಕರಾದರು.

Last Updated : Nov 5, 2021, 12:21 PM IST

ABOUT THE AUTHOR

...view details