ಕರ್ನಾಟಕ

karnataka

ETV Bharat / state

ಟಾರ್ಗೆಟ್‌ ಬೆಂಗಳೂರು: 28 ಕ್ಷೇತ್ರಕ್ಕೂ ಪ್ರಭಾರಿಗಳ ನೇಮಿಸಿದ ಕೇಸರಿ ಪಡೆ

ರಾಜ್ಯ ರಾಜಧಾನಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಿದ ರಾಜ್ಯ ಬಿಜೆಪಿ ಪಕ್ಷ.

BJP
ಬಿಜೆಪಿ

By

Published : Feb 10, 2023, 7:21 AM IST

ಬೆಂಗಳೂರು :ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ರಾಜ್ಯ ಬಿಜೆಪಿ ರಥಯಾತ್ರೆ, ಮೋರ್ಚಾಗಳ ಸಮಾವೇಶಕ್ಕೆ ಸಂಚಾಲಕರ ನೇಮಕ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಧಾನಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಿದ್ದು, ತಕ್ಷಣದಿಂದಲೇ ಚುನಾವಣಾ ಸಿದ್ಧತೆ ಆರಂಭಕ್ಕೆ ಸೂಚನೆ ನೀಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿ: ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಗೆ ಪ್ರಭಾರಿಗಳನ್ನು ಬಳಸಿಕೊಂಡು ಚುನಾವಣಾ ತಯಾರಿ ಆರಂಭಿಸುವಂತೆ ರಾಜ್ಯ ಘಟಕ ಸೂಚನೆ ನೀಡಿದೆ.

ಬೆಂಗಳೂರು ಕೇಂದ್ರ ಜಿಲ್ಲೆ ವ್ಯಾಪ್ತಿ :ಅದರಂತೆ ಈ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ, ಸರ್ವಜ್ಞ ನಗರ, ಸಿ.ವಿ ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹಾದೇವಪುರ ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಘಟಕ, ಪ್ರಭಾರಿಗಳನ್ನು ಬಳಸಿಕೊಂಡು ತಕ್ಷಣದಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವಂತೆ ಜಿಲ್ಲಾಧ್ಯಕ್ಷ ಜಿ ಮಂಜುನಾಥ್ ಗೆ ಸೂಚನೆ ನೀಡಿದೆ.

ಬೆಂಗಳೂರು ಉತ್ತರ ಜಿಲ್ಲೆ ವ್ಯಾಪ್ತಿ :ಇನ್ನು,ಯಲಹಂಕ, ಕೆ.ಆರ್. ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಘಟಕ, ಈಗಾಗಲೇ 2 ಕ್ಷೇತ್ರಗಳಿಗೆ ನೀಡಿರುವ ಸೂಚನೆಗಳನ್ನೆ ನೀಡಿದೆ. ಪ್ರಭಾರಿಗಳನ್ನು ಬಳಸಿಕೊಂಡು ತಕ್ಷಣದಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವಂತೆ ಜಿಲ್ಲಾಧ್ಯಕ್ಷ ಬಿ.ನಾರಾಯಣ ಅವರಿಗೆ ಸೂಚಿಸಿದೆ.

ಈ ಮೇಲಿನ ಬೆಂಗಳೂರಿನ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಈ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಅಗತ್ಯವಿದೆ. ಹಾಗಾಗಿ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್​ ಜೊತೆಗಿನ ತೀವ್ರ ಪೈಪೋಟಿಯಲ್ಲಿ ಮಹಾನಗರದ ಕ್ಷೇತ್ರಗಳ ಗೆಲ್ಲಲು ರಣತಂತ್ರ ರೂಪಿಸುತ್ತಿದೆ. ಇದರಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ, ಆದರೆ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಕ್ಷೇತ್ರವಾರು ಪ್ರಭಾರಿ ನೇಮಿಸಿ ಚುನಾವಣಾ ತಯಾರಿ ನಡೆಸುತ್ತಿದೆ.

2018 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಕ್ಷೇತ್ರಗಳಲ್ಲಿ, ಬಿಜೆಪಿ 11 ಹಾಗೂ ಜೆಡಿಎಸ್‌ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ಆದರೆ ನಂತರ ಕಾಂಗ್ರೆಸ್​ನ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಮತ್ತು ಜೆಡಿಎಸ್​ನ ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದರು ಹಾಗಾಗಿ ಬಿಜೆಪಿ ಸಂಖ್ಯೆ 11 ರಿಂದ 15 ಕ್ಕೆ ಹೆಚ್ಚಳವಾಗಿತ್ತು, ಇದೀಗ ಈ ಸಂಖ್ಯೆಯನ್ನು ಉಳಿಸಿಕೊಂಡಲ್ಲಿ ಅಧಿಕಾರಕ್ಕೇರುವ ಮ್ಯಾಜಿಕ್ ನಂಬರ್ ತಲುಪಲು ಸಹಕಾರಿಯಾಗಲಿದೆ ಹಾಗಾಗಿ ಬೆಂಗಳೂರನ್ನೇ ಮೊದಲ ಟಾರ್ಗೆಟ್ ಮಾಡಿಕೊಂಡು ಪ್ರಭಾರಿಗಳ ನೇಮಿಸಿ ಬಿಜೆಪಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದೆ.

2013 ರಲ್ಲಿ 28 ಸ್ಥಾನದಲ್ಲಿ 11 ಸ್ಥಾನಗಳಿಸಿದ್ದ ಬಿಜೆಪಿ 2018 ರಲ್ಲಿಯೂ 11 ಸ್ಥಾನಗಳಿಸಲಷ್ಟೇ ಶಕ್ತವಾಗಿತ್ತು, ಮೋದಿ ಪರ ಅಲೆ ಇದ್ದರೂ ಸಿಕ್ಕ ಸ್ಥಾನ 11 ಮಾತ್ರ, ಉಪ ಚುನಾವಣೆ ನಂತರವೇ ಅದು 15 ಸ್ಥಾನಕ್ಕೇರಿದೆ ಹಾಗಾಗಿ ಈ ಬಾರಿಯೂ 11 ಸ್ಥಾನದ ಆಸುಪಾಸಿನ ಸಂಖ್ಯೆ ಸಿಕ್ಕರೆ ಸರ್ಕಾರ ರಚನೆಯ ಹಾದಿ ಕಠಿಣವಾಗಲಿದೆ ಎನ್ನುವ ಕಾರಣಕ್ಕೆ ಬೆಂಗಳೂರು ನಗರದ ಮೂರು ಜಿಲ್ಲೆಗಳ ಮೇಲೆ ವಿಶೇಷ ಆಸಕ್ತಿ ವಹಿಸಿ ಪ್ರಭಾರಿಗಳನ್ನು ನೇಮಿಸಿದೆ.

ಇದನ್ನೂ ಓದಿ :ನಾಳೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ: ಚುನಾವಣಾ ಪ್ರಚಾರತಂತ್ರದ ಚರ್ಚೆ ಸಾಧ್ಯತೆ

ABOUT THE AUTHOR

...view details