ಕರ್ನಾಟಕ

karnataka

ETV Bharat / state

ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಚಿನ್ನಮ್ಮ : ತಮಿಳುನಾಡು ರಾಜಕೀಯ ವೇದಿಕೆ ಸಿದ್ಧತೆಗೆ ಇಲ್ಲಿಂದಲೇ ಪ್ಲಾನ್​ - Devanahalli Resort

ತಮಿಳುನಾಡಿನ ಮಾಜಿ ಸಿಎಂ ಜಯಲಲಿತ ಅವರ ಆಪ್ತೆ ಶಶಿಕಲಾ, ಭಾನುವಾರ ದೇವನಹಳ್ಳಿ ಬಳಿಯ ನಂದಿಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್​ ರೆಸಾರ್ಟ್​ಗೆ ಆಗಮಿಸಿದ್ದು, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

Devanahalli Resort
ತಮಿಳುನಾಡು ಚಿನ್ನಮ್ಮ

By

Published : Feb 1, 2021, 9:30 AM IST

ಬೆಂಗಳೂರು:ತಮಿಳುನಾಡಿನ ಮಾಜಿ ಸಿಎಂ ಜಯಲಲಿತ ಅವರ ಆಪ್ತೆ, ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ನಟರಾಜನ್​ ಅವರು ದೇವನಹಳ್ಳಿ ಬಳಿಯ ನಂದಿಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ಭೇಟಿ ನೀಡಿ​​ ವಿಶ್ರಾಂತಿ ಪಡೆಯುತ್ತಿದ್ದಾರೆ.

ಭಾನುವಾರ ರೆಸಾರ್ಟ್​ಗೆ ಆಗಮಿಸಿದ ಶಶಿಕಲಾ ಅವರನ್ನು ಸಂಬಂಧಿಕರು ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ನಂತರ ರೆಸಾರ್ಟ್​ಗೆ ತಮಿಳುನಾಡಿನ ಕೆಲ ಎಂಪಿಗಳು ಭೇಟಿ ನೀಡುವ ಸಾಧ್ಯತೆ ಇದೆ. ತಮಿಳುನಾಡಿಗೆ ಭೇಟಿ ನೀಡುವಾಗ ಏನೆಲ್ಲಾ ಪ್ಲಾನ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದ್ದು, ರಾಜಕೀಯವಾಗಿ ಯಾವ ರೀತಿ ವೇದಿಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನಿಂದಲೇ ಶಶಿಕಲಾ ಪ್ಲಾನ್ ಮಾಡಲಿದ್ದಾರೆ.

ಇನ್ನೂ ಐದಾರು ದಿನಗಳ ಕಾಲ ರೆಸಾರ್ಟ್​ನಲ್ಲಿರಲಿದ್ದು, ಜಯಲಲಿತಾ ಹಾದಿಯಲ್ಲಿ ಱಲಿ ನಡೆಸಲು ಪ್ಲಾನ್ ಮಾಡಲಿದ್ದಾರೆ ಎಂದು ಶಶಿಕಲಾ ಆಪ್ತರಿಂದ ಮಾಹಿತಿ ದೊರೆತಿದೆ.

ABOUT THE AUTHOR

...view details