ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ(Puneeth Rajkumar) ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ನಡೆಸಲಾಗ್ತಿದೆ.
ಈ ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್( Tamil actor Vishal) ಆಗಮಿಸಿದ್ದು, ಪುನೀತ್ ನಮ್ಮನ್ನು ಆಗಲಿದ್ದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಅರಮನೆ ಒಳಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶಾಲ್(Vishal), ಪುನೀತ್ ನಡೆಸುತ್ತಿದ್ದ ಶಕ್ತಿಧಾಮವನ್ನು(Shaktidhama)ನಾನು ಮುಂದುವರಿಸಿಕೊಂಡು ಹೋಗ್ತೇನೆ ಎಂದು ಪುನರುಚ್ಛರಿಸಿದ್ದಾರೆ.
ಪುನೀತ್ ಅವರು ಒಳ್ಳೆ ಮನುಷ್ಯ, ನನಗೆ ಪುನೀತ್ ದೊಡ್ಡ ಅಣ್ಣನ ತರ, ತಮ್ಮನಾಗಿ ನಾನು ಪುನೀತ್ಗೆ ಭಾಷೆ ಕೊಡ್ತಿದ್ದೇನೆ, ನಾನು ಶಕ್ತಿಧಾಮದ ಹೆಣ್ಣುಮಕ್ಕಳ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ತೇನೆ. ಕೊಟ್ಟ ಮಾತನ್ನ ಉಳಿಸಿಕೊಳ್ತೇನೆ ಎಂದು ವಿಶಾಲ್ ಹೇಳಿದ್ದಾರೆ.
ಪುನೀತ್ ಸಾಮಾಜಿಕ ಕಾರ್ಯವನ್ನ ನಾನು ಮುಂದುವರೆಸಿಕೊಂಡು ಹೋಗುವೆ ಎಂದ ತಮಿಳು ನಟ ವಿಶಾಲ್.. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಾಗಿದೆ. ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ.
ಅವರ ಮಾನವೀಯ ಗುಣ, ಕೆಲಸ ಎಲ್ಲರು ಮೆಚ್ವುವಂತದ್ದು. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅವರ ಕೆಲಸಗಳನ್ನು ಭಾರತೀಯ ಚಿತ್ರರಂಗ ಸಾವಿರ ವರ್ಷ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.