ಕರ್ನಾಟಕ

karnataka

ETV Bharat / state

ಬಿಜೆಪಿ ಟ್ವೀಟ್​ಗೆ ರಾಜ್ಯ ಜೆಡಿಎಸ್ ವಕ್ತಾರ ಟಿ. ಎ ಶರವಣ ಬಹಿರಂಗ ಸವಾಲ್​..

ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಪಾತದ ಬಗ್ಗೆ ಬಿಜೆಪಿ ಮಾತನಾಡುವುದು ಹಾಸ್ಯಾಸ್ಪದ. ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಭ್ರಷ್ಟಚಾರದ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಿಎಂ ಆಪ್ತ ಸಿಬ್ಬಂದಿ, ಗುತ್ತಿಗೆದಾರ ಮೇಲೆ ಬಿಜೆಪಿ ಅವರೇ ದಾಳಿ ಮಾಡಿದ್ದಾರೆ..

State JDS spokesman T. A Sharavana
ರಾಜ್ಯ ಜೆಡಿಎಸ್ ವಕ್ತಾರ ಟಿ. ಎ ಶರವಣ

By

Published : Oct 20, 2021, 8:30 PM IST

ಬೆಂಗಳೂರು : ವಿಶ್ವಾಸ ದ್ರೋಹದಲ್ಲಿ ಬಿಜೆಪಿ ಎತ್ತಿದ ಕೈ. ಪಕ್ಷ ಕಟ್ಟಿ ಬೆಳೆಸಿದ ಬಿ. ಎಸ್ ಯಡಿಯೂರಪ್ಪ ಅವರನ್ನೇ ಅವಮಾನ ಮಾಡಿ, ಅವರಿಂದ ಹೀನಾಯವಾಗಿ ರಾಜೀನಾಮೆ ಪಡೆದಿದೆ. ಪಕ್ಷ ಕಟ್ಟಿದ ನಾಯಕನಿಗೆ ದ್ರೋಹ ಮಾಡಿರುವುದು ದೊಡ್ಡ ವಿಶ್ವಾಸ ದ್ರೋಹ. ಈ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ರಾಜ್ಯ ಜೆಡಿಎಸ್ ವಕ್ತಾರ ಟಿ ಎ ಶರವಣ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಡಿನ ಜನ 'ಈ ಬಿಜೆಪಿ ಸಿಡಿಗಳನ್ನು ಕಣ್ಣಾರೆ ಕಂಡಿದ್ದರು'. ಒಬ್ಬ ಅಲ್ಲ, ಬೇಕಾದಷ್ಟು ನಾಯಕರು ರಾಸಲೀಲೆಯ ಸಿಡಿಗಳಲ್ಲಿ ರಾರಾಜಿಸಿದ ನಾಯಕರ ಪಕ್ಷದಿಂದ ಕುಮಾರಣ್ಣ ನೈತಿಕತೆಯ ಪಾಠ ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಪಾತದ ಬಗ್ಗೆ ಬಿಜೆಪಿ ಮಾತನಾಡುವುದು ಜೋಕ್, ಹಾಸ್ಯಾಸ್ಪದ. ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಿಎಂ ಆಪ್ತ ಸಿಬ್ಬಂದಿ, ಗುತ್ತಿಗೆದಾರರ ಮೇಲೆ ಬಿಜೆಪಿ ಅವರೇ ದಾಳಿ ಮಾಡಿದ್ದಾರೆ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ಸಣ್ಣ ಯೋಗ್ಯತೆ ಕೂಡ ಇಲ್ಲ. ಬೈಗಾಮಿ ಬಗ್ಗೆ ಮಾತನಾಡಿರುವುದು ತಪ್ಪು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹಿಡಿದಿರುವುದು ಸರಿಯಲ್ಲ ಎಂದಿದ್ದಾರೆ.

ಇತ್ತೀಚಿಗೆ ಸಚಿವರ ದಂಡು ಕೋರ್ಟ್​ಗೆ ಹೋಗಿ ಸಿಡಿ ಬಿಡುಗಡೆ ಬಗ್ಗೆ ತಡೆಯಾಜ್ಞೆ ಪಡೆಯಿತು?. ಅಂಥದ್ದು ತಪ್ಪು ಮಾಡಿದ್ದಾದರೂ ಏನು?. ಅವರ ತಪ್ಪಿನ ಬಗ್ಗೆ ಅವರಿಗೆ ಏಕೆ ಅಂಜಿಕೆ. ರಾಜ್ಯದ ಪ್ರಭಾವಿ ಮಂತ್ರಿಗಳು, ಕೇಂದ್ರದ ಮಂತ್ರಿಗಳು, ಬಂಡಾಯ ನಾಯಕರು ಎಲ್ಲರದ್ದೂ ಒಂದೇ ಯೋಗ್ಯತೆ. ಆದರೆ, ಈ ಪಕ್ಷಕ್ಕೆ ಮಾನ, ಮರ್ಯಾದೆ ಇದೆಯೇ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೆಸರುಗಳನ್ನು ಹೇಳುವುದಾದರೆ ಜಾರಕಿಹೊಳಿ, ಸದಾನಂದ ಗೌಡ, ಬಸನಗೌಡ ಪಾಟೀಲ್ ಯತ್ನಾಳ್ ಇನ್ನು ಬಿಡುಗಡೆಗೆ ಕಾದಿರುವ ಸಿಡಿ ಬಗ್ಗೆ ಬಿಜೆಪಿ ಘಟಕ ಏನು ಹೇಳುತ್ತದೆ?. ಒಬ್ಬ ಸಿಎಂ ಸಿಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದವರು ನಾನಲ್ಲ. ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಇಂಥ ಹೀನ, ನಾಚಿಕೆ ಗೆಟ್ಟ ಹಿನ್ನೆಲೆಯ ಬಿಜೆಪಿ ನಾಯಕರು, ಕುಮಾರಸ್ವಾಮಿ ಅವರ ಬಗ್ಗೆ ಹೇಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ನಾವು ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ.

ಗುತ್ತಿಗೆದಾರರ ಮೇಲೆ ದಾಳಿ ನಡೆಸಿ 750 ಕೋಟಿ ರೂ. ಅಕ್ರಮ ಆಸ್ತಿ ಪಾಸ್ತಿ ಪತ್ತೆ ಹಚ್ಚಿದರಲ್ಲ. ಅದು ಯಾರದ್ದು?. ಗುತ್ತಿಗೆದಾರರ ಹಣ ಎಲ್ಲಿಗೆ ಹೋಗುತ್ತಿತ್ತು. ಯಾರು ಯಾರು ಶಾಮೀಲು ಎಂದು ಪತ್ತೆ ಹಚ್ಚಲಿ. ಇವರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು ಆಗುತ್ತದೆ. ಮಾಜಿ ಸಿಎಂ ಅವರ ಆಪ್ತ ಉಮೇಶ್​ ಅವರ ಹತ್ತಿರ ಸುಮಾರು ಎರಡು ಸಾವಿರ ಕೋಟಿ ಆಸ್ತಿ ಎಲ್ಲಿಂದ ಬಂತು?. ಅದು ಯಾರ ದುಡ್ಡು. ಕೆಎಸ್​ಆರ್​ಟಿಸಿ ಕಂಡಕ್ಟರ್ ಇಷ್ಟು ಹೇಗೆ ದುಡಿದ? ಅದು ಯಾರ ಅಕ್ರಮ ಹಣ? ಉತ್ತರ ಕೊಡಿ ಎಂದು ರಾಜ್ಯ ಬಿಜೆಪಿಗೆ ಶರವಣ ಪ್ರಶ್ನಿಸಿದ್ದಾರೆ.

ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು

ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು. ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ ಇರಲಿ.

ಆರ್‌ಎಸ್‌ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ?. ಅದು ಎಲ್ಲಿ?. ಯಾವಾಗ ನೋಂದಣಿ ಆಗಿದೆ?. ಅದರ ಅಧಿಕೃತ ಕಚೇರಿ ಎಲ್ಲಿದೆ? ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಎಂದು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.

ಗುರುದಕ್ಷಣೆ ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದೆಯಾ? ತನ್ನ ವಹಿವಾಟಿನ ಬಗ್ಗೆ ಬ್ಯಾಲೆನ್ಸ್ ಶೀಟ್ ಇಟ್ಟುಕೊಂಡಿದೆಯಾ? ಅದನ್ನು ಪರಿಶೀಲನೆ ಮಾಡಿದ ಲೆಕ್ಕ ಪರಿಶೋಧಕರು ಯಾರು?. ಶಾಲೆಗಳಲ್ಲಿ ಬಾಲ ಸ್ವಯಂ ಸೇವಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ? ಎಂದು ಟ್ವೀಟ್ ಮೂಲಕ ಜೆಡಿಎಸ್‍ ಪ್ರಶ್ನಿಸಿದೆ.

ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಮಾಡುತ್ತಿರುವುದು ಪೊಳ್ಳಾ?.‌ ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನು ಇಡುವುದು ಅಕ್ರಮ. ಇದಕ್ಕೆ ಪರವಾನಿಗೆ ಪಡೆಯಲಾಗಿದೆಯಾ? ಇಂಥ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಅವರು ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಎದೆಗಾರಿಕೆಯನ್ನು ಬಿಜೆಪಿ ತೋರಲಿಲ್ಲ, ಯಾಕೆ? ಎಂದು ಕೇಳಿದೆ.

ಓದಿ:'ಉದಾಸಿಯವರು ಡಿಕೆಶಿಗೆ ವಿಲ್ ಬರೆದು ಕೊಟ್ಟಿದ್ದಾರಾ?': ಬಿಸಿಪಾ ಪ್ರಶ್ನೆ

ABOUT THE AUTHOR

...view details