ಬೆಂಗಳೂರು: ಇಂದು ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವಾದ್ದರಿಂದ ವಾಕಥಾನ್ ಕಾರ್ಯಕ್ರಮವನ್ನು ಸಮರ್ಥ ಭಾರತ್ ಟ್ರಸ್ಟ್, ಇಂದು ಕಬ್ಬನ್ ಪಾರ್ಕ್ ಬಳಿ ಇರುವ ಕಂಠೀರವ ಸ್ಟೇಡಿಯಂನಲ್ಲಿ ಆಚರಿಸಿತು.
ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ: ಸಂಸದ ಪಿ.ಸಿ. ಮೋಹನ್ - ಕಬ್ಬನ್ ಪಾರ್ಕ್ ಸುತ್ತಾ ವಾಕಥನ್
ಇಂದು ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವಾದ್ದರಿಂದ ಸಮರ್ಥ ಭಾರತ್ ಟ್ರಸ್ಟ್ ಕಂಠೀರವ ಸ್ಟೇಡಿಯಂನಲ್ಲಿ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ
ಕಾರ್ಯಕ್ರಮಕ್ಕೆ ಪಿ.ಸಿ. ಮೋಹನ್, ಫಿಲಂ ಆಕ್ಟರ್ ಕೃಷ್ಣ ಹೆಬ್ಬಾಳೆ ಹಾಗೂ ಮೇಯರ್ ಗೌತಮ್ ಹಾಗೂ ಸಮರ್ಥ ಭಾರತ್ ಟ್ರಸ್ಟ್ನ ಯುವಕರು, ಯುವತಿಯರು ಹಾಗೂ ಅತಿಥಿಗಳು ಭಾಗವಹಿಸಿದ್ರು. ಕಬ್ಬನ್ ಪಾರ್ಕ್ ಸುತ್ತ ವಾಕಥಾನ್ ನಡೆಸಿದ್ರು.
ಇನ್ನು ಈ ಸಂದರ್ಭ ಸಂಸದ ಪಿ.ಸಿ. ಮೋಹನ್ ಮಾತನಾಡಿ, ಇಂದು ಸ್ವಾಮಿ ವಿವೇಕಾನಂದರ 157ನೇ ಜಯಂತಿ. ಈ ವಾಕಥಾನ್ನನ್ನು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದೆ. ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ. ಇವತ್ತಿಗೂ ಅವರು ಯೂತ್ ಐಕಾನ್ ಆಗಿ ಉಳಿದಿದ್ದಾರೆ. ಅವರ ಭಾಷಣವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರು.